Bangalore, ಏಪ್ರಿಲ್ 25 -- ಅಯ್ಯನ ಮನೆ ವೆಬ್‌ ಸೀರಿಸ್‌ ವಿಮರ್ಶೆ: ಅಯ್ಯನ ಮನೆ ವೆಬ್‌ ಸರಣಿ ಏಪ್ರಿಲ್‌ 25ರಂದು ಬಿಡುಗಡೆಯಾಗಿದೆ. ಜೀ5 ಒಟಿಟಿಯಲ್ಲಿ ರಿಲೀಸ್‌ ಆಗಿರುವ ಈ ವೆಬ್‌ ಸರಣಿ ಕುರಿತು ಒಟಿಟಿ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುವಲ್ಲಿ ಈ ವೆಬ್‌ ಸರಣಿ ಯಶಸ್ವಿಯಾಗಿರುವುದೇ? ತಿಳಿಯೋಣ ಬನ್ನಿ. ಇದು ಮಿನಿ ವೆಬ್‌ ಸರಣಿ. ಒಂದು ಸಿನಿಮಾ ನೋಡುವುದಕ್ಕಿಂತಲೂ ಬೇಗ ಈ ಮಿನಿ ವೆಬ್‌ಸರಣಿಯನ್ನು ನೋಡಿ ಮುಗಿಸಬಹುದು. 111.19 ನಿಮಿಷದ ಈ ವೆಬ್‌ ಸರಣಿಯು ಒಂದು ಮನೆಯೊಳಗೆ ನಡೆಯುವ ನಿಗೂಢ ಕೊಲೆಗಳ ಜಾಡು ಹಿಡಿಯುವ ಕಥಾನಕ ಹೊಂದಿದೆ.

ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವನ್ನು ಆರು ಭಾಗಗಳಾಗಿ ಕತ್ತರಿಸಿದಂತೆ ಈ ಮಿನಿ ವೆಬ್‌ಸರಣಿ ನೋಡಿಸಿಕೊಂಡು ಹೋಗುತ್ತದೆ. ಸಸ್ಪೆನ್ಸ್‌ ಥ್ರಿಲ್ಲರ್‌ಗಳಿಗೆ ಇರಬೇಕಾದ ಹಿನ್ನೆಲೆ ಧ್ವನಿ, ಬಿಜಿಎಂ ಇದೆ. ಹಿನ್ನೆಲೆ ಸಂಗೀತ ಈ ವೆಬ್‌ ಸರಣಿಯ ಗಮನ ಸೆಳೆಯುವ ಪ್ರಮುಖಾಂಶ ಎಂದರೂ ತಪ್ಪಾಗದು. ದೃಶ್ಯಗಳು ಮಂದ ಬೆಳಕಿನಲ್ಲಿಯೇ ಹೆಚ್ಚು ಕಾಣಿಸುತ್ತವೆ....