ಭಾರತ, ಮೇ 6 -- ಮೇ 6ರ ಅಮೃತಧಾರೆ ಸೀರಿಯಲ್ನ ಪ್ರೋಮೋವನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. ಈ ಮೂಲಕ ಒಂದಷ್ಟು ಅಚ್ಚರಿಯ ವಿಚಾರಗಳು ಇಂದಿನ ಸಂಚಿಕೆಯಲ್ಲಿ ಇರಲಿದೆ ಎಂಬುದನ್ನು ಈ ಪ್ರೋಮೋ ಹೇಳುತ್ತದೆ.
ಕಾಸ್ಟ್ ಕಟಿಂಗ್ ನೆಪದಲ್ಲಿ ಕಂಪನಿಯ ದೊಡ್ಡ ಸಂಬಳದ ನೌಕರರನ್ನು ಜೈದೇವ್, ಯಾರ ಅನುಮತಿಯನ್ನೂ ಪಡೆಯದೆ ವಜಾ ಮಾಡಿರುತ್ತಾನೆ. ಅದರಲ್ಲಿ ಗೌತಮ್ ಆಪ್ತ, ಆನಂದ್ಗೂ ನೋಟೀಸ್ ಹೋಗಿರುತ್ತದೆ.
ಅದರಂತೆ, ಗೌತಮ್ ಬಳಿ ಬಂದ ಆನಂದ್, ಕೌಟುಂಬಿಕ ಕಾರಣ ನೀಡಿ ಕೆಲಸಕ್ಕೆ ರಾಜೀನಾಮೆ ನೀಡುತ್ತಾನೆ. ಆದರೆ, ಈ ರಾಜೀನಾಮೆ ಹಿಂದೆ ಜೈದೇವ್ ಇದ್ದಾನೆ ಎಂಬುದನ್ನು ಹೇಳಿಕೊಂಡಿರಲಿಲ್ಲ.
ಇದೀಗ ಅಚ್ಚರಿಯ ರೀತಿಯಲ್ಲಿ, ಈ ರಾಜೀನಾಮೆ ನಿರ್ಧಾರದ ಹಿಂದೆ ಜೈದೇವ್ ಕೈವಾಡ ಇರುವುದು ಗೌತಮ್ ದಿವಾನ್ಗೂ ಗೊತ್ತಾಗಿದೆ. ಕೋಪದಲ್ಲಿಯೇ ಜೈದೇವ್ಗೆ ಕಾಲ್ ಮಾಡಿ, ಆತನನ್ನು ಕರೆಸಿಕೊಂಡಿದ್ದಾನೆ.
ಕೆಲಸ ಕಳೆದು ಕೊಂಡ ಎಲ್ಲರನ್ನೂ ಒಂದೆಡೆ ಸೇರಿಸಿ, ಅದೇ ಸ್ಥಳಕ್ಕೆ ಜೈದೇವ್ನನ್ನು ಕರೆಸಿ, ಎಲ್ಲರ ರಾಜೀನಾಮೆ ಹಿಂದಿನ ಕಾರಣ ತಿಳಿದುಕೊಂಡಿದ್ದಾನೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.