Bengaluru, ಏಪ್ರಿಲ್ 29 -- ಗಾಡ್ ಫಾದರ್ ಹಂಗಿಲ್ಲದೆ, ಚಿತ್ರರಂಗಕ್ಕೆ ಬಂದು ಸ್ಟಾರ್ ಆಗಿ ಗಟ್ಟಿಯಾಗಿ ನಿಂತವರು ನಟ ಯಶ್. ಇದೀಗ ಇದೇ ನಟ ಟಾಕ್ಸಿಕ್ ಸಿನಿಮಾ ಶೂಟಿಂಗ್ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.
ಇನ್ನೇನು ಮುಂದಿನ ವರ್ಷದ ಏಪ್ರಿಲ್ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ರಾಮಾಯಣ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ. ಅದಕ್ಕೂ ಮೊದಲು ಇನ್ನೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ ರಾಕಿಂಗ್ ಸ್ಟಾರ್.
ಅಪ್ಪ ಅಮ್ಮನ ಮೊದಲಕ್ಷರವನ್ನೇ ಬಳಸಿಕೊಂಡು ʻPAʼ ಹೆಸರಿನ ಚಿತ್ರನಿರ್ಮಾಣ ಸಂಸ್ಥೆಯನ್ನು ತೆರೆದಿದ್ದಾರೆ ಯಶ್. PA ಎಂದರೆ ಪುಷ್ಪಾ ಅರುಣ್ಕುಮಾರ್ ಎಂದರ್ಥ. ಸದ್ಯ ಇದರ ಸಂಪೂರ್ಣ ಜವಾಬ್ದಾರಿಯನ್ನು ಯಶ್ ತಾಯಿ ಪುಷ್ಪ ಅವರೇ ವಹಿಸಿಕೊಂಡಿದ್ದಾರೆ.
ಈ ʻPAʼ ಪ್ರೊಡಕ್ಷನ್ಸ್ ಹೆಸರಿನಲ್ಲಿ ಹೊಸ ಸಿನಿಮಾ ಸಹ ಇನ್ನೇನು ಘೋಷಣೆ ಆಗಲಿದೆ. ಏ. 30ರ ಬೆಳಗ್ಗೆ 11ಕ್ಕೆ ಶೀರ್ಷಿಕೆ ಸಹಿತ ಫಸ್ಟ್ ಲುಕ್ ಬಿಡುಗಡೆ ಆಗಲಿದೆ.
ಸದ್ಯದ ಮಾಹಿತಿ ಪ್ರಕಾರ ಪೃಥ್ವಿ ಅಂಬಾರ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದು, ಕಾವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.