ಭಾರತ, ಫೆಬ್ರವರಿ 21 -- ಬೆಂಗಳೂರು: ಅನ್ಯ ರಾಜ್ಯಗಳಲ್ಲಿ ತಯಾರಾಗಿರುವ 9 ಇಂಜಕ್ಷನ್‌ಗಳು (ಚುಚ್ಚುಮದ್ದುಗಳು) ಕರ್ನಾಟಕ ಸರ್ಕಾರದ ಲ್ಯಾಬ್‌ಗಳಲ್ಲಿ ನಡೆಸುವ ಸ್ಟೆರ್ಲಿಟಿ ಟೆಸ್ಟ್‌ನಲ್ಲಿ ಫೇಲ್ ಆಗಿವೆ ಎಂದು ಕೇಂದ್ರ ಸರ್ಕಾವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ಗುರುವಾರ ಈ ಕುರಿತು ಪತ್ರ ಬರೆದಿರುವ ದಿನೇಶ್ ಗುಂಡೂರಾವ್‌, ಕರ್ನಾಟಕದಲ್ಲಿ ಈ ಚುಚ್ಚುಮದ್ದು ಮಾರಾಟ ಮಾಡದಂತೆ ತಡೆಯುವುದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಬಂಗಾಳ ಸೇರಿ ಅನ್ಯ ರಾಜ್ಯಗಳಲ್ಲಿ ತಯಾರಾಗಿ ಕರ್ನಾಟಕದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ 9 ಚುಚ್ಚುಮದ್ದುಗಳು ಕರ್ನಾಟಕ ಸರ್ಕಾರದ ಲ್ಯಾಬ್‌ಗಳಲ್ಲಿ ಸ್ಟೆರ್ಲಿಟಿ ಟೆಸ್ಟ್ ಪಾಸ್ ಆಗುವಲ್ಲಿ ವಿಫಲವಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 9 ಚುಚ್ಚುಮದ್ದುಗಳ ವಿವರ ಹೀಗಿದೆ -

ಪಶ್ಚಿಮ ಬಂಗಾಳದ ಬರೂಯಿಪುರದ ಫಾರ್ಮಾ ಇಂಪ್ಯಾಕ್ಸ್‌ ಲ್ಯಾಬೋರೇಟರೀಸ್‌ ...