ಭಾರತ, ಮಾರ್ಚ್ 23 -- Kalaji Column: ಒಂದಿನ ನೀವು ಹೊಸ ಬಟ್ಟೆ ಧರಿಸಿದ್ದೀರಿ ಎಂದುಕೊಳ್ಳಿ. ಆ ದಿನ ಹೊರಗೆ ಬಂದ ಕೂಡಲೇ ಯಾರೋ ನಿಮ್ಮ ಸ್ನೇಹಿತನೋ ಸ್ನೇಹಿತೆಯೋ 'ಹೋ ಈ ಡ್ರೆಸ್‌ ಅನ್ನು ನಿನ್ನೆ ಚಿಕ್ಕಪೇಟೆ ಫುಟ್‌ಪಾತ್‌ನಲ್ಲಿ ನೋಡಿದ್ದೆ. 200 ರೂ ಸೇಲ್ ಇತ್ತು' ಅಂದ ಕೂಡಲೇ ನಿಮ್ಮ ಹೊಸ ಬಟ್ಟೆಯ ಉತ್ಸಾಹ ಜರ್ರನೆ ಇಳಿದು ಹೋಗುತ್ತದೆ. ಅಂದೆಲ್ಲಾ ನಿಮ್ಮ ತಲೆಯಲ್ಲಿ ಆ ವ್ಯಕ್ತಿ ಆಡಿತ ಆ ಮಾತುಗಳೇ ಪದೇ ಪದೇ ಗುನುಗುನಿಸುತ್ತಿರುತ್ತದೆ.

ಒಂದು ದಿನ ನಿಮ್ಮ ಬಳಿ ಇರುವ ಸಣ್ಣ ಕಾರಿನಲ್ಲಿ ಹೋಗಿ ನಿಮ್ಮ ಸ್ನೇಹಿತನೊಬ್ಬನನ್ನು ಮೀಟ್ ಆಗುತ್ತೀರಿ. ಆತ 'ತನ್ನ ಕಾರಿನ ಬಗ್ಗೆ ಹೇಳುತ್ತಾ, ನನ್ನ ಬಳಿ ಐ20 ಕಾರಿದೆ' ಎಂದು ಹೇಳುತ್ತಾನೆ. ಆ ದಿನ ಪೂರ್ತಿ ನಿಮ್ಮ ತಲೆಯಲ್ಲಿ ನಿಮ್ಮ ಸ್ನೇಹಿತ ಹೇಳಿದ ಕಾರಿನ ಬಗ್ಗೆಯೇ ಇರುತ್ತದೆ.

ನೀವು ಲೇಖನ ಬರೆಯುವವರು ಅಂದ್ಕೊಳ್ಳಿ. ಯಾರೋ ನಿಮ್ಮ ಲೇಖನಕ್ಕೆ ಕಾಮೆಂಟ್ ಮಾಡಿರುತ್ತಾರೆ. ಇದನ್ನೆಲ್ಲಾ ಯಾಕೆ ಬರಿತೀರಾ, ಅರ್ಥವೂ ಆಗೊಲ್ಲ, ಸಮಯವೂ ವ್ಯರ್ಥ ಅಂತ ಹೇಳಿ ಇರ್ತಾರೆ. ಈ ಮಾತು ನಿಮ್ಮ ಮನಸ್ಸನ್ನು ...