Bengaluru, ಏಪ್ರಿಲ್ 18 -- ಆರೋಗ್ಯಕರ ಹಾರ್ಮೋನುಗಳ ಸಮತೋಲನ ಕಾಪಾಡಿಕೊಳ್ಳುವಲ್ಲಿ ತೂಕವು ಪ್ರಮುಖ ಪಾತ್ರವಹಿಸುತ್ತದೆ. ಇದು ನಿಮ್ಮ ಋತುಚಕ್ರ ಮತ್ತು ಅಂಡನೋತ್ಪತಿ ಮೇಲೆ ನೇರವಾಗಿ ಪ್ರಭಾವ ಬೀರುವುದರಿಂದ ನಿಮ್ಮಲ್ಲಿ ಅನೇಕ ದೈಹಿಕ ನ್ಯೂನತೆಗಳನ್ನು ಉಂಟುಮಾಡುವುದರ ಜೊತೆಗೆ ತಿಂಗಳಿನ ಋತುಸ್ರಾವದ ಮೇಲೂ ಅಡ್ಡಪರಿಣಾಮವಾಗುತ್ತದೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ.

ಅನಿಯಮಿತ ಋತುಚಕ್ರವು ದೇಹದ ತೂಕ ಮತ್ತು ಬೊಜ್ಜಿಗೆ ಸಂಪರ್ಕವನ್ನು ಹೊಂದಿದೆ. ಬೊಜ್ಜು ಹಾರ್ಮೋನುಗಳ ವ್ಯಾಧಿಯನ್ನುಂಟು ಮಾಡುವುದರಿಂದ ದೇಹದ ತೂಕವು ಅನಿಯಮಿತ ಋತುಚಕ್ರವನ್ನು ಉಂಟುಮಾಡುತ್ತದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಮತ್ತು ಹೈಪೋಥೈರಾಯ್ಡಿಸಮ್‌‎ನಂತಹ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರು ಅನಿಯಮಿತ ಮುಟ್ಟಿನ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ತೂಕದಲ್ಲಿ ಆಗುವ ಏರಿಳಿತವು ಋತುಚಕ್ರ ಬದಲಾವಣೆಯಾಗಲು ಸಹಕಾರಿ ಎಂಬುದನ್ನು ಮಹಿಳೆಯರು ಅರಿತುಕೊಳ್ಳುವುದು ತುಂಬಾ ಮುಖ್ಯ.

ಅಧಿಕ ತೂಕವು ಮಾಸಿಕ ಋತುಮಾನದ ಮೇಲೆ ಪ್ರಭಾವ ಬೀರ...