ಭಾರತ, ಮಾರ್ಚ್ 23 -- ಕಳೆದ ವರ್ಷದ ವಿಧ್ವಂಸಕ ಬ್ಯಾಟಿಂಗ್ ವೈಭವ ಮುಂದುವರೆಸಿರುವ ಸನ್ರೈಸರ್ಸ್ ಹೈದರಾಬಾದ್ 2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತನ್ನ ಮೊದಲ ಪಂದ್ಯದಿಂದಲೇ ದಾಖಲೆಗಳ ಬೇಟೆ ಆರಂಭಿಸಿದೆ. ಮಾರ್ಚ್ 23ರಂದು ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಲೀಗ್ನ 2ನೇ ಪಂದ್ಯದಲ್ಲಿ ಎದುರಾಳಿ ರಾಜಸ್ಥಾನ್ ರಾಯಲ್ಸ್ ಬೌಲರ್ಸ್ ಮೇಲೆ ದಂಡಯಾತ್ರೆ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ದಾಖಲೆಗಳ ಮೇಲೆ ದಾಖಲೆ ಬರೆದಿದೆ.
ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (24) ಮತ್ತು ಟ್ರಾವಿಸ್ ಹೆಡ್ (67) ಸಾಲಿಡ್ ಆರಂಭ ಒದಗಿಸಿಕೊಟ್ಟರೆ, ಬಳಿಕ ಇಶಾನ್ ಕಿಶನ್ (106*) ಚೊಚ್ಚಲ ಐಪಿಎಲ್ ಶತಕದೊಂದಿಗೆ ಮೆರೆದಾಡಿದರು. ಹೆನ್ರಿಚ್ ಕ್ಲಾಸೆನ್ (34), ನಿತೀಶ್ ಕುಮಾರ್ ರೆಡ್ಡಿ (30) ಅಮೋಘ ಕಾಣಿಕೆ ನೀಡಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ 2ನೇ ಗರಿಷ್ಠ ಸ್ಕೋರ್. ಮೊದಲು ಸ್ಥಾನವೂ ಇದೇ ತಂಡದ್ದೇ ಇದೆ.
ಇಂಡಿಯನ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.