ಭಾರತ, ಮಾರ್ಚ್ 23 -- ಕಳೆದ ವರ್ಷದ ವಿಧ್ವಂಸಕ ಬ್ಯಾಟಿಂಗ್ ವೈಭವ ಮುಂದುವರೆಸಿರುವ ಸನ್​ರೈಸರ್ಸ್​ ಹೈದರಾಬಾದ್ 2025ರ ಇಂಡಿಯನ್ ಪ್ರೀಮಿಯರ್​ ಲೀಗ್​​ನಲ್ಲಿ ತನ್ನ ಮೊದಲ ಪಂದ್ಯದಿಂದಲೇ ದಾಖಲೆಗಳ ಬೇಟೆ ಆರಂಭಿಸಿದೆ. ಮಾರ್ಚ್​ 23ರಂದು ಹೈದರಾಬಾದ್​ನ ರಾಜೀವ್​ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಲೀಗ್​​ನ 2ನೇ ಪಂದ್ಯದಲ್ಲಿ ಎದುರಾಳಿ ರಾಜಸ್ಥಾನ್ ರಾಯಲ್ಸ್ ಬೌಲರ್ಸ್ ಮೇಲೆ ದಂಡಯಾತ್ರೆ ನಡೆಸಿದ ಸನ್​ರೈಸರ್ಸ್ ಹೈದರಾಬಾದ್ ದಾಖಲೆಗಳ ಮೇಲೆ ದಾಖಲೆ ಬರೆದಿದೆ.

ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (24) ಮತ್ತು ಟ್ರಾವಿಸ್ ಹೆಡ್ (67) ಸಾಲಿಡ್ ಆರಂಭ ಒದಗಿಸಿಕೊಟ್ಟರೆ, ಬಳಿಕ ಇಶಾನ್ ಕಿಶನ್ (106*) ಚೊಚ್ಚಲ ಐಪಿಎಲ್​ ಶತಕದೊಂದಿಗೆ ಮೆರೆದಾಡಿದರು. ಹೆನ್ರಿಚ್ ಕ್ಲಾಸೆನ್ (34), ನಿತೀಶ್ ಕುಮಾರ್ ರೆಡ್ಡಿ (30) ಅಮೋಘ ಕಾಣಿಕೆ ನೀಡಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ 2ನೇ ಗರಿಷ್ಠ ಸ್ಕೋರ್. ಮೊದಲು ಸ್ಥಾನವೂ ಇದೇ ತಂಡದ್ದೇ ಇದೆ.

ಇಂಡಿಯನ್...