ಭಾರತ, ಏಪ್ರಿಲ್ 9 -- Odela 2 Trailer: ತಮನ್ನಾ ಭಾಟಿಯಾ ಹಾಗೂ ಕನ್ನಡದ ವಶಿಷ್ಠ ಸಿಂಹ ನಟನೆಯ 'ಓದೆಲಾ 2' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರವು 2022ರಲ್ಲಿ ಬಿಡುಗಡೆಯಾದ 'ಓದೆಲಾ ರೈಲ್ವೆ ಸ್ಟೇಷನ್' ಚಿತ್ರದ ಮುಂದುವರಿದ ಭಾಗವಾಗಿದೆ. ಈ ಚಿತ್ರದ ಟ್ರೈಲರ್ ನೋಡಿದರೆ ಮೈ ಜುಂ ಎನ್ನುವುದು ಖಂಡಿತ. ಅತಿಮಾನುಶ ಶಕ್ತಿಗಳ ವಿರುದ್ಧ ಹೋರಾಡುವ ಸಾಧ್ವಿ ಪಾತ್ರದಲ್ಲಿ ತಮನ್ನಾ ಕಾಣಿಸಿದ್ದಾರೆ. ಇದು ಅತಿಮಾನುಷ ಶಕ್ತಿ ಹಾಗೂ ದೈವಿಕ ಶಕ್ತಿಯ ನಡುವಿನ ಹೋರಾಟದ ಕಥೆಯನ್ನು ಹೊಂದಿದೆ. ಓದೆಲಾ 2 ಚಿತ್ರ ಏಪ್ರಿಲ್ 17ರಂದು ತೆರೆ ಕಾಣಲಿದೆ.

'ಓದೆಲಾ ರೈಲ್ವೆ ಸ್ಟೇಷನ್' ಚಿತ್ರವು ಸಾಕಷ್ಟು ಯಶಸ್ಸು ಕಂಡಿತ್ತು. ಮೊದಲ ಭಾಗಗಿಂತ 2ನೇ ಭಾಗವು ಇನ್ನಷ್ಟು ರೋಮಾಂಚಕವಾಗಿ ಇರಬಹುದು ಎಂಬುದನ್ನು ಟ್ರೈಲರ್ ನೋಡಿ ಊಹಿಸಬಹುದು. ತಮನ್ನಾ ಈ ಚಿತ್ರದಲ್ಲಿ ಶಿವಶಕ್ತಿಯಾಗಿ ಹಿಂದೆಂದೂ ನೋಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟ್ರೈಲರ್‌ನಲ್ಲಿ ತಮನ್ನಾ ಅನುಷ್ಕಾ ಶೆಟ್ಟಿಯ ಭಾಗಮತಿಯನ್ನು ನೆನಪಿಸುವುದು ಸುಳ್ಳಲ್ಲ. ಮೊದಲ ಬಾರಿ ಸಾಧ್ವಿ ಪ...