Bengaluru, ಮೇ 26 -- ಸ್ಯಾಂಡಲ್ವುಡ್ ಕಂಡ ನಟಸಾರ್ವಭೌಮ ಡಾ. ರಾಜ್ಕುಮಾರ್ ಬರೀ ನಟನಾಗಿ ಜನರ ಮನಸ್ಸಿನಲ್ಲಿ ಬೇರೂರಿಲ್ಲ. ನಡೆ, ನುಡಿ ಸರಳತೆಯ ಮೂಲಕವೇ ಕೋಟಿ ಕೋಟಿ ಜನರ ಆರಾಧ್ಯ ದೈವವಾಗಿದ್ದರು. ಯೋಗವನ್ನು ಸಿದ್ಧಿಸಿಕೊಂಡಿದ್ದರು. ಅದ್ಯಾವ ಮಟ್ಟಿಗೆ ಎಂದರೆ ಅದೇ ಯೋಗದ ಮೂಲಕವೇ ತಮ್ಮ ಉಸಿರು ನಿಲ್ಲಬೇಕು ಎಂದು ಅವರು ನಿರ್ಧರಿಸಿದ್ದರು. ಋಷಿ ಮುನಿಗಳು ಯೋಗವನ್ನು ಸಿದ್ಧಿಸಿಕೊಂಡು, ತಮ್ಮ ಸಾವನ್ನು ತಾವೇ ಬರಮಾಡಿಕೊಳ್ಳುತ್ತಾರೆ. ಅದೇ ರೀತಿ ಡಾ. ರಾಜ್ಕುಮಾರ್ ಸಹ ಎರಡು ಬಾರಿ ತಾವೇ ಸ್ವ ಹತ್ಯೆಗೆ ನಿರ್ಧಾರ ಮಾಡಿದ್ದರು. ಆ ಅಚ್ಚರಿಯ ಸಂಗತಿಯನ್ನು ಅಣ್ಣಾವ್ರ ಅಳಿಯ ಗ್ರೀನ್ ಹೌಸ್ ವಾಸು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ಡಾ. ರಾಜ್ಕುಮಾರ್ ಬರೀ ನಟನಲ್ಲ. ಅವರೊಬ್ಬ ಯೋಗಿ. ಯೋಗವನ್ನು ಸಿದ್ಧಿಸಿಕೊಂಡಿದ್ದರು. ಆ ಯೋಗದ ಮೂಲಕವೇ ತಮ್ಮ ಸಾವಾಗಬೇಕು ಎಂದು ನಿರ್ಧರಿಸಿದ್ದರು. ನಿತ್ಯ ಒಂದಷ್ಟು ಸಮಯ ಆ ಯೋಗವನ್ನು ಪ್ರಾಕ್ಟಿಸ್ ಮಾಡುತ್ತಿದ್ದರು. 2006ರ ಏಪ್ರಿಲ್ ತಿಂಗಳಲ್ಲಿಯೇ ಪಲ್ಸ್ ರೇಟ್ ಕಡಿಮೆ ಆಗಿದ್ದಕ್ಕೆ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.