ಭಾರತ, ಮೇ 22 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 203ನೇ ಎಪಿಸೋಡ್ ಕಥೆ ಹೀಗಿದೆ. ಛತ್ರಿ ತನ್ನ ಲೈಸನ್ಸ್ ಹರಿದ ವಿಚಾರ ಕೇಳಿ ಪಾರ್ವತಿ ಬೇಸರಗೊಳ್ಳುತ್ತಾಳೆ. ಆದರೆ ತಾನು ಹೀಗೆ ಬೇಸರ ಮಾಡಿಕೊಂಡಿದ್ದರೆ ನನಗೆ ಆಸ್ಪತ್ರೆ ಕಟ್ಟಿಸಿಕೊಡಬೇಕೆಂದುಕೊಂಡಿದ್ದ ಶಿವು ಕೂಡಾ ಖುಷಿಯಿಂದ ಇರುವುದಿಲ್ಲ ಎಂದು ತಿಳಿದು ನಾನು ಲೈಸನ್ಸ್ ಕಳೆದುಕೊಂಡಿರಬಹುದು, ಆದರೆ ವಿದ್ಯೆಯನ್ನಲ್ಲ ಈ ವಿಚಾರವಾಗಿ ಯಾರೂ ಯೋಚನೆ ಮಾಡಬೇಡಿ ಎಂದು ಸಮಾಧಾನ ಹೇಳಿ ರೂಮ್ಗೆ ಹೋಗುತ್ತಾಳೆ. ಪಾರ್ವತಿ ಮನಸ್ಸನ್ನು ಅರಿತ ಶಿವು, ಅವಳನ್ನು ಸಮಾಧಾನ ಮಾಡಲು ರೂಮ್ಗೆ ಬರುತ್ತಾನೆ.
ಪಾರ್ವತಿ, ರೂಮ್ಗೆ ಬಂದು ಕಣ್ಣೀರಿಡುತ್ತಾಳೆ. ಶಿವು ಒಳಗೆ ಹೋದಾಗ ಕಣ್ಣೀರು ಒರೆಸಿಕೊಂಡು ತನಗೆ ಏನೂ ಆಗಿಲ್ಲವೆನ್ನುವಂತೆ ನಾಟಕ ಮಾಡುತ್ತಾಳೆ. ನೀನು ಈಗ ನನ್ನ ಹೆಂಡತಿ. ನಿನ್ನ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಮನಸ್ಸಿನಲ್ಲಿ ಇಷ್ಟು ನೋವನ್ನು ಬಚ್ಚಿಟ್ಟುಕೊಂಡು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.