Bengaluru, ಮೇ 8 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 193ನೇ ಎಪಿಸೋಡ್ ಕಥೆ ಹೀಗಿದೆ. ಪಿಂಕಿಗೆ ತಾಳಿ ಕಟ್ಟಲು ಜಿಮ್ ಸೀನ ನಿರಾಕರಿಸುತ್ತಾನೆ. ಶಿವಣ್ಣನ ಮನೆಗೆ ಬರುವ ಇಂದ್ರಾಣಿ, ಮೊಸಳೆ ಕಣ್ಣೀರು ಸುರಿಸಿ ಪಾರ್ವತಿ ಬಳಿ ಒಳ್ಳೆಯವಳಂತೆ ನಟಿಸುತ್ತಾಳೆ. ಚಿಕ್ಕಮ್ಮನನ್ನು ಡ್ರಾಪ್ ಮಾಡುವ ನೆಪದಲ್ಲಿ ಪರಶು ಕೂಡಾ ಶಿವು ಮನೆಗೆ ಬರುತ್ತಾನೆ. ಎಲ್ಲರೂ ಕಷ್ಟ ಸುಖ ಮಾತನಾಡುತ್ತಿದ್ದರೆ ಪರಶು ಮಾತ್ರ ಗೋಡಂಬಿಯನ್ನು ಹುಡುಕಿ ಬಂದು ಅವನ ಬಳಿ ಕೂರುತ್ತಾನೆ.
ಮನೆಗೆ ಚಿಕ್ಕಮ್ಮ ಬಂದಿದ್ದನ್ನು ನೋಡಿ ಪಾರ್ವತಿ ಖುಷಿಯಾಗುತ್ತಾಳೆ. ಎಲ್ಲರೂ ಮಾತನಾಡುವಾಗ ರಾಣಿ ಕೂಡಾ ಅಲ್ಲಿಗೆ ಬರುತ್ತಾಳೆ. ಆದರೆ ಪರಶು ಮಾತ್ರ ಗೋಡಂಬಿ ಬಳಿ ಹೋಗಿ, ಯಮ ಕರೆದರೂ ನೀನು ಹೋಗುತ್ತಿಲ್ಲ, ಆದರೆ ಈಗ ಆ ರೀತಿ ಅಲ್ಲ ನಿನಗಾಗಿ ನಾನು ಟಾನಿಕ್ ತಂದಿದ್ದೇನೆ, ಇದನ್ನು ಕುಡಿದುಬಿಡು, ಒಂದೇ ಸಲ ಪ್ರಾಣ ಹೋಗುತ್ತದೆ ಎಂದು ತಾನು ತಂದ ಔಷಧಿಯನ್ನು ಗೋಡಂಬಿಗೆ ಕುಡಿಸಲು ಪ್ರಯತ್ನಿಸುತ್ತಾನೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.