ಭಾರತ, ಮಾರ್ಚ್ 4 -- ಅಜಿತ್ ಕುಮಾರ್ ಅಭಿನಯದ ಆಕ್ಷನ್ ಸಿನಿಮಾ ವಿಡಾಮುಯರ್ಚಿ ಯಾವಾಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ಸಾಕಷ್ಟು ಜನರು ಕಾತರದಿಂದ ಕಾದಿದ್ದರು. ಆದರೆ, ಈಗ ಆ ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ಯಾಕೆಂದರೆ ಅಜಿತ್ ಅಭಿನಯದ ಸಿನಿಮಾ 'ವಿಡಾಮುಯರ್ಚಿ' ಈಗ ಆನ್‌ಲೈನ್‌ನಲ್ಲಿ ನೋಡಲು ಲಭ್ಯವಿದೆ. ಕನ್ನಡದಲ್ಲೂ ನೀವು ಈ ಸಿನಿಮಾವನ್ನು ವೀಕ್ಷಿಸಬಹುದು. ಈ ಸಿನಿಮಾ ಇನ್ನೂ ಕೆಲ ಭಾಷೆಗಳಲ್ಲಿ ಲಭ್ಯವಿದೆ. ನೀವು ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿ ಸಿನಿಮಾ ವೀಕ್ಷಿಸಬಹುದು.

ಸಿನಿಮಾದ ಕಥೆ ಏನು?ಅಜೆರ್ಬೈಜಾನ್‌ನಲ್ಲಿ ಕುಖ್ಯಾತ ಗುಂಪಿನಿಂದ ತನ್ನ ಪತ್ನಿ ಅಪಹರಿಸಲ್ಪಟ್ಟ ನಂತರ ರಕ್ಷಣಾ ಕಾರ್ಯಾಚರಣೆಗೆ ಹೊರಟ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಅಜಿತ್ ರೆಗ್ಯುಲರ್ ಆಗಿ ತೋರಿಸಿದ ಎಲ್ಲಾ ಇಮೇಜ್‌ಗಳನ್ನೂ ಈ ಸಿನಿಮಾದಲ್ಲಿ ಮುರಿದಿದ್ದಾರೆ. ಈ ಸಿನಿಮಾದಲ್ಲಿ ಎಲ್ಲ ಸಿನಿಮಾಗಳಿಗಿಂತ ಭಿನ್ನವಾಗಿ ಅಭಿನಯಿಸಿದ್ದಾರೆ. ಸಂಪೂರ್ಣವಾಗಿ ವಿಭಿನ್ನ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ರೊಮ್ಯಾಂಟಿಕ್ ದೃಶ್ಯಗಳಿಗಿಂತಲೂ ...