Bengaluru, ಮಾರ್ಚ್ 21 -- 10ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಜೀ ಕನ್ನಡದ ಸೀರಿಯಲ್‌ಗಳು ಪಡೆದ ಟಿಆರ್‌ಪಿ ಎಷ್ಟು

ನಾ ನಿನ್ನ ಬಿಡಲಾರೆ: ವಾರದಿಂದ ವಾರಕ್ಕೆ ಟಿಆರ್‌ಪಿಯಲ್ಲಿ ಗಮನಸೆಳೆಯುತ್ತಿದೆ ನಾ ನಿನ್ನ ಬಿಡಲಾರೆ ಧಾರಾವಾಹಿ. 10ನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಅಲಂಕರಿಸಿರುವ ಈ ಧಾರಾವಾಹಿ 8.2 ಟಿಆರ್‌ಪಿ ಪಡೆದಿದೆ.

ಅಣ್ಣಯ್ಯ: ಅಣ್ಣಯ್ಯ ಸೀರಿಯಲ್‌ 10ನೇ ವಾರಕ್ಕೆ 8.2 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ. ನಗರ ಪ್ರದೇಶದ ಟಿವಿಆರ್‌ನಲ್ಲಿ ಅಣ್ಣಯ್ಯ, ನಾ ನಿನ್ನ ಬಿಡಲಾರೆ ಸೀರಿಯಲ್‌ಗಿಂತಲೂ ಹಿಂದಿದೆ.

ಶ್ರಾವಣಿ ಸುಬ್ರಮಣ್ಯ: ಜೀ ಕನ್ನಡದ ಜೋಡಿ ಜೀವಗಳ ಪ್ರೇಮಕಥೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌, ಹತ್ತನೇ ವಾರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಸೀರಿಯಲ್‌ಗೆ 7.6 ಟಿಆರ್‌ಪಿ ಸಿಕ್ಕಿದೆ.

ಲಕ್ಷ್ಮೀ ನಿವಾಸ: ಜೀ ಕನ್ನಡದ ಮೆಗಾ ಧಾರಾವಾಹಿ ಲಕ್ಷ್ಮೀ ನಿವಾಸ ಅದ್ಯಾಕೋ ಕೊಂಚ ಮಂಕಾದಂತಿದೆ. ಈ ಸೀರಿಯಲ್‌ 10ನೇ ವಾರದ ಟಿಆರ್‌ಪಿಯಲ್ಲಿ 7.4 ಟಿಆರ್‌ಪಿ ಪಡೆದು, ನಾಲ್ಕನೇ ಸ್ಥಾನದಲ್ಲಿದೆ....