ಭಾರತ, ಮೇ 20 -- ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ಬರ್ತ್ಡೇ ಖುಷಿಯಲ್ಲಿದ್ದಾರೆ. ಎನ್ಟಿಆರ್ ಅವರ ಬರ್ತ್ಡೇ ಪ್ರಯುಕ್ತ ಬಾಲಿವುಡ್ನಲ್ಲಿ ನಿರ್ಮಾಣವಾಗಿರುವ ʻವಾರ್ 2ʼ ಸಿನಿಮಾದಿಂದ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ರೀತಿಯಲ್ಲಿ ಮೊದಲ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾ ಮೂಲಕ ಬಾಲಿವುಡ್ನ ಕದ ತಟ್ಟಿರುವ ಜೂ ಎನ್ಟಿಆರ್, ತಮ್ಮ ವ್ಯಾಪ್ತಿಯನ್ನು ಮತ್ತಷ್ಟು ಹಿರಿದಾಗಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಟೀಸರ್ನಲ್ಲಿ ಹೃತಿಕ್ ರೋಷನ್ ಎದುರು ಖಳನಾಯಕನಾಗಿ ಅಬ್ಬರಿಸಿದ್ದಾರವರು.
2019ರಲ್ಲಿ ಬಾಲಿವುಡ್ ತೆರೆಗೆ ಬಂದಿದ್ದ ʻವಾರ್ʼ ಸಿನಿಮಾದಲ್ಲಿ ಹೃತಿಕ್ ರೋಷನ್ ಜತೆಗೆ ಟೈಗರ್ ಶ್ರಾಫ್ ನಟಿಸಿದ್ದರು. ಆ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದರು. ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡ್ ಮಾಡಿದ್ದ ಈ ಸಿನಿಮಾ, ಒಳ್ಳೆಯ ಕಮಾಯಿ ಮಾಡಿತ್ತು. ಇದೀಗ ಆರು ವರ್ಷಗಳ ಬಳಿಕ ಇದೇ ಸಿನಿಮಾದ ಸೀಕ್ವೆಲ್ ತೆರೆಗೆ ಬರಲು ಅಣಿಯಾಗಿದೆ. ಪಾರ್ಟ್ 2 ಚಿತ್ರದ ನಿರ್ದೇಶನದ ಜವಾಬ್ದಾರಿ ಈ ಬಾರಿ ಆಯನ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.