Bengaluru, ಮೇ 15 -- ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ ಬೆಳಗ್ಗೆ ಮಹರ್ಷಿವಾಣಿ ಮೂಲಕ ನಾಡಿನ ವೀಕ್ಷಕರ ಮುಂದೆ ಎದುರಾಗುವ ಜ್ಯೋತಿಷಿ ಆನಂದ್ ಗುರೂಜಿ ಅವರ ಕಾರು ಅಡ್ಡಗಟ್ಟಿ ಬ್ಲಾಕ್ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಆನಂದ್ ಗುರೂಜಿ ದೂರು ನೀಡಿದ್ದು, ದೂರಿನನ್ವಯ ಕೃಷ್ಣಮೂರ್ತಿ (ಎ1) ಮತ್ತು ಈ ಹಿಂದೆ ಖಾಸಗಿ ವಾಹಿನಿಯ ನಿರೂಪಕಿಯಾಗಿದ್ದ ದಿವ್ಯಾ ವಸಂತ (ಎ2) ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ಈಗಾಗಲೇ ವಿಡಿಯೋ ಬಗ್ಗೆ ಕೋರ್ಟ್ನಿಂದ ಸ್ಟೇ ತಂದರೂ, ನಿಮ್ಮ ಖಾಸಗಿ ವಿಡಿಯೋ ನಮ್ಮ ಬಳಿ ಇದೆ, ಹಣ ನೀಡಿ ಎಂದು ನಿತ್ಯ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆನಂದ್ ಗುರೂಜಿ ದೂರಿನಲ್ಲಿ ಆರೋಪ ಮಾಡಿದ್ದಾರೆ. ವಿಡಿಯೋ ಮತ್ತು ಜಮೀನು ಖರೀದಿ ವಿಚಾರಕ್ಕೆ ಸಂಬಂಧಪಟ್ಟಂತೆ, ಈಗಾಗಲೇ ಕೋರ್ಟ್ನಿಂದ ತಡೆಯಾಜ್ಞೆ ತಂದರೂ, ಕಾರು ಅಡ್ಡಗಟ್ಟಿ , ಅಶ್ಲೀಲ ಪದಗಳಿಂದ ನಿಂದನೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.