ಭಾರತ, ಫೆಬ್ರವರಿ 7 -- Zomato name change: ಆಹಾರ ಮತ್ತು ಕಿರಾಣಿ ವಿತರಣಾ ಪ್ಲಾಟ್‌ಫಾರ್ಮ್ ಜೊಮಾಟೊ ಹೆಸರು ಬದಲಾಯಿಸಿಕೊಂಡಿದ್ದು, ಇನ್ನು ಎಟರ್‌ನಲ್‌ ಆಗಿ ಗುರುತಿಸಿಕೊಳ್ಳಲಿದೆ. ಜೊಮಾಟೋ ಕಂಪನಿ ಗುರುವಾರ (ಫೆ 6) ಈ ವಿಚಾರ ಬಹಿರಂಗ ಪಡಿಸಿದ್ದು, ಜೊಮಾಟೋ ಲಿಮಿಟೆಡ್ ಬದಲು ಎಟರ್‌ನಲ್ ಲಿಮಿಟೆಡ್ ಆಗಿ ಕಂಪನಿ ಕಾರ್ಯಾಚರಿಸಲಿದೆ. ಹೊಸ ಲಾಂಛನ (ಲೋಗೋ)ವನ್ನು ಕೂಡ ಕಂಪನಿ ಅನಾವರಣಗೊಳಿಸಿದೆ. ದೀಪೀಂದರ್ ಗೋಯೆಲ್ ಆರಂಭಿಸಿದ ಜೊಮಾಟೊ ಕಂಪನಿಯ ಆಂತರಿಕ ವ್ಯವಹಾರಗಳಲ್ಲಿ ಎಟರ್ನಲ್ ಹೆಸರನ್ನು ಎರಡು ವರ್ಷಗಳಿಂದ ಬಳಸಲಾಗುತ್ತಿದೆ ಎಂದು ಕಂಪನಿ ವಿವರಿಸಿದೆ.

ಷೇರುದಾರರಿಗೆ ಗುರುವಾರ ಈ ಕುರಿತು ಪತ್ರ ಬರೆದಿರುವ ದೀಪೀಂದರ್ ಗೋಯೆಲ್‌, ಕಂಪನಿಯ ಆಡಳಿತ ಮಂಡಳಿಯು ಮರು ನಾಮಕರಣಕ್ಕೆ ಅನುಮತಿ ನೀಡಿದೆ. ಈ ಬದಲಾವಣೆಯನ್ನು ಬೆಂಬಲಿಸಬೇಕು ಎಂದು ಷೇರುದಾರರಲ್ಲಿ ವಿನಂತಿಸುತ್ತಿರುವುದಾಗಿ ಹೇಳಿದ್ದಾರೆ.

"ಅದನ್ನು ಅನುಮೋದಿಸಿದಾಗ ಮತ್ತು ನಮ್ಮ ಕಾರ್ಪೊರೇಟ್ ವೆಬ್‌ಸೈಟ್ zomato.com ನಿಂದ eternal.com ಗೆ ಪರಿವರ್ತನೆಗೊಳ್ಳುತ್ತದೆ. ನಾವು ...