Bengaluru, ಏಪ್ರಿಲ್ 16 -- ಮೇಷ: ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತಹ ಕೆಲಸ ಕಾರ್ಯಗಳಲ್ಲಿ ತೊಡಗಿದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮೊದಲು ಗುರುಗಳ ಅನುಗ್ರಹವನ್ನು ಪಡೆಯಬೇಕು. ತಮ್ಮ ಹಿರಿಯರ ಆದೇಶ ಅಥವಾ ಸಹಕಾರದಂತೆ ನಡೆದುಕೊಂಡಲ್ಲಿ ಯಾವುದೇ ಹಿನ್ನೆಡೆ ಎದುರಾಗುವುದಿಲ್ಲ. ದಿಡೀರನೆಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡುಬರುತ್ತದೆ ಇವರು ಅವಶ್ಯಕವಾಗಿ ಹರಿಗ್ರೀವ ಸ್ತೋತ್ರವನ್ನು ಪಠಿಸಬೇಕು ಆರುದ್ರ ನಕ್ಷತ್ರವು ಇರುವ ದಿನದಂದು ಬೆಳಗಿನ ವೇಳೆ ನಾಗ ದೇವರಿಗೆ ಪೂಜೆ ಸಲ್ಲಿಸಬೇಕು ಓಡಾಡಲು ತೊಂದರೆ ಇರುವವರು ಸಹಾಯ ಮಾಡಬೇಕು ಕಪ್ಪು ನಾಯಿಗೆ ಆಹಾರ ನೀಡಬೇಕು ಇದರಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವುದಲ್ಲದೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ವೃಷಭ: ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ವೃಷಭ ಲಗ್ನ ಅಥವ ರಾಶಿಯವರು ನಿಧಾನಿಗಳಾಗುತ್ತಾರೆ. ಬೇರೆಯವರ ಸಹಾಯ ಅಥವಾ ಸಹಕಾರ ಇವರಿಗೆ ಅತಿ ಉಪಯುಕ್ತ. ಕನಿಷ್ಠ ಪಕ್ಷ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸ್ಪೂರ್ತಿಯ ಅಗತ್ಯತೆ ಇರುತ್ತದೆ. ನಿಮ್ಮಲ್ಲಿ ಒಂದು ರೀತಿ...