Bangalore, ಏಪ್ರಿಲ್ 23 -- ಬೆಂಗಳೂರು: ಶೂನ್ಯ ನೆರಳು ದಿನ ಎಂದು ಕರೆಯಲ್ಪಡುವ ಅಪರೂಪದ ಘಟನೆಗೆ ಬೆಂಗಳೂರು ಏಪ್ರಿಲ್ 24 ರಂದು ಮಧ್ಯಾಹ್ನ 12.17 ಕ್ಕೆ ಸಾಕ್ಷಿಯಾಗಲಿದೆ. ಈ ಅಪರೂಪದ ಕ್ಷಣದಲ್ಲಿ, ಸೂರ್ಯನಿಂದಾಗಿ ನೆರಳು ಇರುವುದಿಲ್ಲ. ಇದರಿಂದಾಗಿ ಲಂಬ ವಸ್ತುಗಳು ತಮ್ಮ ನೆರಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತವೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಐಐಎಯ ವಿಜ್ಞಾನ ಸಂವಹನ, ಸಾರ್ವಜನಿಕ ಔಟ್ರೀಚ್ ಮತ್ತು ಶಿಕ್ಷಣ (ಸ್ಕೋಪ್) ವಿಭಾಗದ ನೇತೃತ್ವ ವಹಿಸಿರುವ ಡಾ.ನಿರುಜ್ ಮೋಹನ್ ರಾಮಾನುಜಂ, ಸೂರ್ಯನು ಆಕಾಶದಲ್ಲಿ ತನ್ನ ಅತ್ಯುನ್ನತ ಬಿಂದುವನ್ನು ತಲುಪಿದಾಗ ಈ ವಿದ್ಯಮಾನ ಸಂಭವಿಸುತ್ತದೆ. ಪರಿಣಾಮವಾಗಿ, ನೆರಳುಗಳು ನೇರವಾಗಿ ವಸ್ತುಗಳ ಕೆಳಗೆ ಬೀಳುತ್ತವೆ ಮತ್ತು ಮಾನವನ ಕಣ್ಣಿಗೆ ಅಗೋಚರವಾಗುತ್ತವೆ ಎಂದು ವಿವರಿಸುತ್ತಾರೆ

ಶೂನ್ಯ ನೆರಳು ದಿನ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಚೆನ್ನೈ ಮತ್ತು ಮಂಗಳೂರಿನಂತಹ ಸ್ಥಳಗಳು ಸೇರಿದಂತೆ ಸಮಭಾಜಕ ವೃತ್ತ ಮತ್ತು ...