Bangalore, ಫೆಬ್ರವರಿ 8 -- ವಾಟ್ಸಪ್‌ನಂತಹ ಸೋಷಿಯಲ್‌ ಮೀಡಿಯಾಗಳಲ್ಲಿ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ ಹಣ, ಖಾಸಗಿ ಡೇಟಾ ಕಳೆದುಕೊಳ್ಳುವ ಸಂಗತಿ ನಿಮಗೆ ಗೊತ್ತಿರಬಹುದು. ಪ್ರತಿನಿತ್ಯ ಹ್ಯಾಕರ್‌ಗಳು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಿಕೊಂಡು ಸಾವಿರಾರು, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರ ಸುದ್ದಿಗಳು ಪ್ರತಿನಿತ್ಯ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಸೈಬರ್‌ ವಂಚಕರ ಕುರಿತು ಓದುಗರಲ್ಲಿ ಜಾಗೃತಿ ಮೂಡಿಸಲು ಡಿಜಿಟಲ್‌ ಜಾಗೃತಿ ಲೇಖನ ಸರಣಿಯನ್ನೇ ಆರಂಭಿಸಿತ್ತು. ವಾಟ್ಸಪ್‌ನಲ್ಲಿ ಕಾಣಿಸುವ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್‌ ಮಾಡಬೇಡಿ, ಐಫೋನ್‌ ಗೆಲ್ಲಿ ಇತ್ಯಾದಿ ಆಮಿಷ ತೋರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ ಎಂದು ಸದಾ ಜನರನ್ನು ಎಚ್ಚರಿಸಿದರೂ ಆನ್‌ಲೈನ್‌ ವಂಚನೆ ಕಡಿಮೆಯಾಗಿಲ್ಲ. ಇದೀಗ ಬಂದ ಸುದ್ದಿ ಪ್ರಕಾರ ಹ್ಯಾಕರ್‌ಗಳು ಯಾವುದೇ ಲಿಂಕ್‌ ಮಾಡಿಸದೆಯೂ ನಿಮ್ಮ ಫೋನ್‌ ಅನ್ನು ಹ್ಯಾಕ್‌ ಮಾಡಬಹುದಂತೆ. ಈ ಕುರಿತು ಬಳಕೆದಾರರಿಗೆ ವಾಟ್ಸಪ್‌ ಎಚ್ಚರಿಕೆ ನೀಡಿದೆ.

ಒ...