ಭಾರತ, ಮಾರ್ಚ್ 22 -- Stone house in Bengaluru: ಮನೆ ಕಟ್ಟುವ ಆಲೋಚನೆ ತಲೆಗೆ ಬಂದಾಗ ನಮಗೆ ಮೊದಲು ನೆನಪಾಗೋದು ಕಬ್ಬಿಣ, ಸಿಮೆಂಟ್‌, ಕಲ್ಲು. ಇವಿಲ್ಲದೇ ಮನೆ ಸಂಪೂರ್ಣವಾಗಲು ಸಾಧ್ಯವೇ ಇಲ್ಲ. ಅದರಲ್ಲೂ ಸಿಮೆಂಟ್ ಇಲ್ಲ ಅಂದ್ರೆ ಮನೆ ಕಟ್ಟೋಕೆ ಸಾಧ್ಯನಾ ಅಂತ ಕೇಳಿದ್ರೆ ಖಂಡಿತ ಸಾಧ್ಯವಿಲ್ಲ ಅಂತ ನಾವೆಲ್ಲರೂ ಹೇಳ್ತೀವಿ. ಆದರೆ ಸ್ವಲ್ಪವೂ ಸಿಮೆಂಟ್ ಬಳಸದೇ ಮನೆಯೊಂದನ್ನು ಕಟ್ಟಿ ತೋರಿಸುವ ಮೂಲಕ ಅದು ಸಾಧ್ಯ ಎಂದಿದ್ದಾರೆ ಬೆಂಗಳೂರು ಮೂಲದ ವ್ಯಕ್ತಿ. ಇದನ್ನು ಪ್ರಿಯಂ ಸಾರಸ್ವತ್ ಎನ್ನುವವರು ಹೋಂ ಟೂರ್ ಮಾಡುವ ಮೂಲಕ ಆ ಮನೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಸ್ವಲ್ಪವೂ ಕೂಡ ಸಿಮೆಂಟ್ ಬಳಸದೇ ಕಟ್ಟಿರುವ ಮನೆಯ ವಿಡಿಯೊವನ್ನು ಪ್ರಿಯಂ ಪೋಸ್ಟ್ ಮಾಡಿದ್ದು, ಈ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಲ್ಲದೇ ಈ ಮನೆಯು ನೋಡುಗರ ಅಚ್ಚರಿಗೂ ಕಾರಣವಾಗಿದೆ. ಇದು ವಿಶ್ವ ಮೊದಲ ಸಿಮೆಂಟ್ ರಹಿತ ಮನೆ ಎಂದು ಮಾಲೀಕರು ಹೇಳಿಕೊಳ್ಳುತ್ತಿದ್ದಾರೆ. ಈ ಮನೆಯಲ್ಲಿ ಇಂಗಾಲದ ಯಾವುದೇ ಅಂಶವೂ ಇಲ್ಲ ಎಂದು ಕೂಡ ಅವರು ಹೇಳುತ್ತಾರೆ.

ಇದನ್ನ...