Bangalore, ಮಾರ್ಚ್ 22 -- Zee5 Top 10 Movies: ವಿಕೇಂಡ್‌ ಬಂದಾಗ ಯಾವ ಸಿನಿಮಾ ನೋಡುವುದು ಎಂದು ಸಾಕಷ್ಟು ಜನರು ಯೋಚಿಸುತ್ತಾರೆ. ಈ ಬಿಸಿಲಿನಲ್ಲಿ ಹೊರಗೆ ಹೋಗುವುದು ಕಷ್ಟ. ಮನೆಯಲ್ಲಿಯೇ ಕುಳಿತುಕೊಂಡು ಒಟಿಟಿಯಲ್ಲಿರುವ ಒಳ್ಳೊಳ್ಳೆಯ ಸಿನಿಮಾಗಳನ್ನು ನೋಡೋಣ ಎಂದು ಕೆಲವರು ಯೋಚಿಸುತ್ತಿರಬಹುದು. ಜೀ5 ಒಟಿಟಿ ಚಂದಾದಾರರಾಗಿರುವವರಿಗೆ ಅನುಕೂಲವಾಗುವಂತೆ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳನ್ನು ಇಲ್ಲಿ ನೀಡಲಾಗಿದೆ.

ವನವಾಸ್: ನಾನಾ ಪಾಟೇಕರ್‌ ನಟನೆಯ ವನವಾಸ್ ಸಿನಿಮಾವು ಜೀ5 ಟಾಪ್‌ 10 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾಕ್ಕೆ ಐಎಂಡಿಬಿ ತಾಣದಲ್ಲಿ 6.7 ರೇಟಿಂಗ್‌ ದೊರಕಿದೆ.

ಸಂಕ್ರಾಂತಿಕಿ ವಾಸ್ತುನಂ: ಜೀ5 ಟಾಪ್‌ 10 ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ತೆಲುಗು ಭಾಷೆಯ ಆಕ್ಷನ್ ಹಾಸ್ಯ ಚಿತ್ರ ಸಂಕ್ರಾಂತಿಕಿ ವಾಸ್ತುನಂ ಇದೆ. ಈ ಸಿನಿಮಾಖ್ಕೆ ಐಎಂಡಿಬಿ ತಾಣದಲಲಿ 6.3 ರೇಟಿಂಗ್‌ ಇದೆ.

ಕುಟುಂಬಸ್ಥಾನಂ: ಜೀ5 ಟಾಪ್‌ 10 ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ತಮಿಳು ಭಾಷೆಯ ಹಾಸ್ಯ ನಾಟಕ ಚಿತ್ರ ಕುಟುಂಬಸ...