ಭಾರತ, ಮಾರ್ಚ್ 13 -- Zee Kannada Serial TRP: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡದ ಸೀರಿಯಲ್‌ಗಳ ಪೈಕಿ ಒಂಭತ್ತನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಪಡೆದ ಸೀರಿಯಲ್‌ ಯಾವುದು? ಯಾವ ಸೀರಿಯಲ್‌ ಟಾಪ್‌, ಯಾವುದು ಕೊನೆಗೆ? ಅಮೃತಧಾರೆ, ಅಣ್ಣಯ್ಯ, ನಾ ನಿನ್ನ ಬಿಡಲಾರೆ, ಪುಟ್ಟಕ್ಕನ ಮಕ್ಕಳು, ಸೀತಾ ರಾಮ, ಬ್ರಹ್ಮಗಂಟು, ಲಕ್ಷ್ಮೀ ನಿವಾಸ, ಶ್ರೀರಸ್ತು ಶುಭಮಸ್ತು, ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ಗಳ 9ನೇ ವಾರದ ಟಿಆರ್‌ಪಿ ಲೆಕ್ಕಾಚಾರ ಹೀಗಿದೆ.

ದೈವ ಶಕ್ತಿ ವರ್ಸಸ್‌ ದುಷ್ಟ ಶಕ್ತಿ ಈ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ನಾ ನಿನ್ನ ಬಿಡಲಾರೆ ಸೀರಿಯಲ್‌ ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ಹೆಚ್ಚೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ. ಟಿಆರ್‌ಪಿಯಲ್ಲಿಯೂ ಮುಂದಡಿ ಇರಿಸಿರುವ ಈ ಸೀರಿಯಲ್‌, ಒಂಬತ್ತನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಅಲಂಕರಿಸಿದೆ. ಅದರಂತೆ, 8.5 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.

ಇನ್ನು ಈ ವರ್ಷದ ಆರಂಭದಿಂದ ಒಟ್ಟು ನಾಲ್ಕು ವಾರಗಳ ಕಾಲ ಸತತವಾಗಿ ನಂಬರ್‌ 1 ಪಟ್ಟದಲ್ಲಿದ್ದ ಶ...