Bengaluru, ಮಾರ್ಚ್ 6 -- ಜೀ ಕನ್ನಡದಲ್ಲಿ ಸಂಜೆ 5:30ರಿಂದ ರಾತ್ರಿ 10:30ರ ವರೆಗೆ ಒಟ್ಟು 9 ಸೀರಿಯಲ್‌ಗಳು ಪ್ರಸಾರವಾಗುತ್ತವೆ. ಇವುಗಳ ಜತೆಗೆ ಮಧ್ಯಾಹ್ನದ ಸಮಯದಲ್ಲಿ ಕೆಲವು ಜೀ ಕನ್ನಡದ ಡಬ್ಬಿಂಗ್‌ ಧಾರಾವಾಹಿಗಳಿಗೂ ವೀಕ್ಷಕರಿದ್ದಾರೆ. ಅವುಗಳ ಪೈಕಿ ಒಂಭತ್ತು ಸೀರಿಯಲ್‌ಗಳಲ್ಲಿ ಎಂಟನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಪಡೆದ ಧಾರಾವಾಹಿ ಯಾವುದು, ಹೀಗಿದೆ ವಿವರ.

ಜೀ ಕನ್ನಡದಲ್ಲಿ ಹೆಚ್ಚೆಚ್ಚು ವೀಕ್ಷಕರ ಮನಸೆಳೆಯುತ್ತಿರುವ ಸೀರಿಯಲ್‌ ಎಂದರೆ ಅದು ಅಣ್ಣಯ್ಯ. ಇದೀಗ ಇದೇ ಸೀರಿಯಲ್‌ ಎಂಟನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ನಂಬರ್‌ 1 ಸ್ಥಾನದಲ್ಲಿದೆ. ಈ ಧಾರಾವಾಹಿ 8.4 ಟಿವಿಆರ್‌ ಪಡೆದುಕೊಂಡಿದೆ.

ಅದೇ ರೀತಿ ಜೀ ಕನ್ನಡದ ಒಂದು ಗಂಟೆಯ ಸೀರಿಯಲ್‌ ಲಕ್ಷ್ಮೀ ನಿವಾಸ 8ನೇ ವಾರದ ಟಿಆರ್‌ಪಿಯಲ್ಲಿ 8.3 ಟಿವಿಆರ್‌ ಪಡೆದುಕೊಂಡು, ಎರಡನೇ ಸ್ಥಾನದಲ್ಲಿದೆ. ಜಯಂತ್‌ ಮತ್ತು ಜಾಹ್ನವಿಯ ಸಂಚಿಕೆಗಳು ವೀಕ್ಷಕರನ್ನು ಹಿಡಿದಿಟ್ಟುಕೊಂಡಿವೆ.

ಜೀ ಕನ್ನಡದ ಇನ್ನೊಂದು ಟಾಪ್‌ ಧಾರಾವಾಹಿಗಳಲ್ಲಿ ಶ್ರಾವಣಿ ಸುಬ್ರಮಣ್ಯ ಸೀರಿಯಲ್...