ಭಾರತ, ಮಾರ್ಚ್ 28 -- ಜೀ ಕನ್ನಡ ವಾಹಿನಿಯಲ್ಲಿ ಯುಗಾದಿ ವಿಶೇಷ ಸಂಚಿಕೆಯನ್ನು ಈ ವಾರ ಪ್ರಸಾರ ಮಾಡಲಿದ್ದಾರೆ.

ಪೃಥ್ವಿ ಭಟ್‌ ಮತ್ತು ದ್ಯಾಮೇಶ್‌ ಜೋಡಿಯು ಉತ್ತಮ ಹಾಡನ್ನು ಹಾಡಿದ್ದು, ಅವರಿಬ್ಬರ ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಪ್ರೋಮೋದಲ್ಲಿ ತಿಳಿಯುತ್ತದೆ.

ಜ್ಯೂರಿ ಮೆಂಬರ್‍ಸ್‌ ಇವರಿಬ್ಬರ ಗಾಯನಕ್ಕೆ ಎದ್ದು ನಿಂತು ಚಪ್ಪಾಳೆ ತಟ್ಟಿ ಆನಂದಿಸಿದ್ದಾರೆ.

ದ್ಯಾಮೇಶ್‌ ಅವರ ಅದ್ಭುತ ಗಾಯನವನ್ನು ಮೆಚ್ಚಿ "ನನ್ನ ಶೋನಲ್ಲಿ ನೀವೊಮ್ಮೆ ಹಾಡಬೇಕು" ಎಂದು ಹೇಳಿದ್ದಾರೆ.

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು ಎಂಬ ಹಾಡಿಗೆ ಪೃಥ್ವಿ ಭಟ್‌ ಮತ್ತು ದ್ಯಾಮೇಶ್‌ ಹಾಡು ಹೇಳಿರುತ್ತಾರೆ.

ಈ ಹಾಡಿಗಾಗಿ ದ್ಯಾಮೇಶ್‌ ಸೈಕಲ್ ಮತ್ತು ಪೃಥ್ವಿ ನೋಟ್‌ಬುಕ್ ತೆಗೆದುಕೊಂಡಿರುತ್ತಾರೆ. ಅದನ್ನೇ ಮತ್ತೆ ಅನುಶ್ರೀ ಹಾಗೂ ಅರ್ಜುನ್‌ ಜನ್ಯ ರಿ ಕ್ರಿಯೇಟ್‌ ಮಾಡಿದ್ದಾರೆ.

ಅರ್ಜುನ್‌ ಜನ್ಯ ವೇದಿಕೆ ಮೇಲೆ ಅನುಶ್ರೀ ಜತೆ ಡಾನ್ಸ್ ಮಾಡಿದ್ದಾರೆ. ವೀಲಿಂಗ್ ಮಾಡುವ ರೀತಿ ಸೈಕಲ್ ತಿರುಗಿಸಿ ಕಾಮಿಡಿ ಕೂಡ ಮಾಡಿದ್ದಾರೆ.

Published by HT Digi...