ಭಾರತ, ಮಾರ್ಚ್ 9 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಮಹಾನಟಿ ಖ್ಯಾತಿಯ ಗಗನ ಹಾಗೂ ಡ್ರೋನ್ ಪ್ರತಾಪ್ ಜೋಡಿಯಾಗಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ಸೀಸನ್‌ 2ರಲ್ಲಿ ಸರ್ಪ್ರೈಸ್‌ ಸುತ್ತು ಶುರುವಾಗಿದೆ. ಅದರಂತೆ, ಡ್ರೋನ್‌ ಪ್ರತಾಪ್‌ ಈ ಹಿಂದೆ ಹೆಲಿಕ್ಯಾಪ್ಟರ್‍‌ನಲ್ಲಿ ಗಗನಾಳನ್ನು ಕೂರಿಸಿ ಖುಷಿಪಡಿಸಿದ್ದರು ಈಗ ಡ್ರೋನ್ ಪ್ರತಾಪ್ ಮತ್ತೊಂದು ಉಡುಗೊರೆ ನೀಡಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯ ವೇದಿಕೆಯ ಮೇಲೆ ತಾನೇ ಮಂಡಿಯೂರಿ ಗಗನಾಳಿಗೆ ಗುಲಾಬಿ ಹೂವು ನೀಡಿದ್ದಾರೆ. ಗಗನಾ ಖುಷಿಯಾಗಿದ್ದಾರೆ.

ಜೀ ಕನ್ನಡ ವೇದಿಕೆಯಲ್ಲಿ ರಚಿತಾ ರಾಮ್ ಹಾಗೂ ರವಿಚಂದ್ರನ್ ಜಡ್ಸ್‌ ಆಗಿ ಕುಳಿತಿರುವ ಸಂದರ್ಭದಲ್ಲಿ ಡ್ರೋನ್‌ ಪ್ರತಾಪ್, ಗಗನಾಳಿಗಾಗಿ ಏನೆಲ್ಲ ಮಾಡಿದ್ದಾನೆ ಎಂದು ವಿವರಿಸಲಾಗುತ್ತದೆ. ನಂತರ ಅವರು ಇನ್ನೂ ಒಂದು ಉಡುಗೊರೆ ಕಾದಿದೆ ಎಂದು ಹೇಳುತ್ತಾರೆ. ಏನಿರಬಹುದು ಆ ಹೊಸ ಉಡುಗೊರೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಾರೆ. ಯಾಕೆಂದರೆ ಡ್ರೋನ್ ಪ್ರತಾಪ್ ನೀಡುತ್ತಿರುವ ಉಡುಗೊರೆ ಎಂದರೆ...