ಭಾರತ, ಮಾರ್ಚ್ 11 -- ಜೀ ಕನ್ನಡ ವಾಹಿನಿಯು ಹೊಸ ಧಾರಾವಾಹಿಯನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ. ಈಗಾಗಲೇ ಹೊಸ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದೆ.

ಕುಟುಂಬದವರೆಲ್ಲ ಕುಳಿತು ನೋಡುವಂತ ಫ್ಯಾಮಿಲಿ ಡ್ರಾಮಾ ಕಥೆ ಹೊಂದಿರುವ ಧಾರಾವಾಹಿಯನ್ನು ಪರಿಚಯಿಸುತ್ತಿದೆ.

ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡತಿ' ಧಾರಾವಾಹಿಯ ನಾಯಕ ಕಿರಣ್ ರಾಜ್‌ ಈ ಹೊಸ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದಾರೆ.

ಈ ಧಾರಾವಾಹಿಯ ಶೀರ್ಷಿಕೆ 'ಕರ್ಣ' ಹೆಸರಿಗೆ ತಕ್ಕನಾದ ಗುಣ ಹೊಂದಿದವನ ರೀತಿ ಕಿರಣ್ ರಾಜ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ.

ಮನೆಯಲ್ಲಿ ಯಾರು ಯಾವುದೇ ಕೆಲಸ ಹೇಳಿದರೂ ಸಹ ಇಲ್ಲ ಎನ್ನದೆ ಮಾಡಿಕೊಡುವ ಗುಣ ಕರ್ಣನದು.

ಕರ್ಣ ಡಾಕ್ಟರ್ ಆಗಿರುತ್ತಾನೆ. ಅವನಿಗೆ ಅವಾರ್ಡ್ ಕೂಡ ಬಂದಿರುತ್ತದೆ, ಆದರೆ, ಮನೆಯವರಿಗೆ ಅದ್ಯಾವುದೂ ಬೇಕಾಗಿಲ್ಲ.

ಅವನು ಆಸ್ಪತ್ರೆಗೆ ಹೋಗ್ತಾ ಇದ್ರೆ ಅವನ ಅತ್ತೆಯೋ, ಚಿಕ್ಕಮ್ಮನೋ ಯಾರೋ ಬಂದು ನನ್ನ ಚಪ್ಪಲಿ ಹೊಲಿಸುಕೊಂಡು ಬಾ ಎನ್ನುತ್ತಾರೆ. ಅದಕ್ಕೂ ಅವನು ಸಮ್ಮತಿಸ...