Bengaluru, ಫೆಬ್ರವರಿ 3 -- Zeba An Accidental Superhero: ಎರಡು ವರ್ಷಗಳಿಂದ ಬಾಲಿವುಡ್‍ ನಟಿ ಹ್ಯೂಮಾ ಖುರೇಷಿ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. 'ಜಾಲಿ LLB 3' ಚಿತ್ರದಲ್ಲಿ ಅವರು ನಟಿಸಿದ್ದು, ಈ ಚಿತ್ರವು ಇದೇ ಏಪ್ರಿಲ್‍ನಲ್ಲಿ ಬಿಡುಗಡೆಯಾಗುತ್ತಿದೆ. ಈ ಬಿಡುವಿನ ವೇಳೆಯಲ್ಲಿ ಹ್ಯೂಮಾ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಸಹಜ. ವಿಷಯವೇನೆಂದರೆ, ಹ್ಯೂಮಾ ಸದ್ದಿಲ್ಲದೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಅವರು ಬರೆದಿರುವ 'Zeba: An Accidental Superhero' ಎಂಬ ಪುಸ್ತಕ ಭಾನುವಾರ, ಜಯಪುರ ಸಾಹಿತ್ಯ ಉತ್ಸವದಲ್ಲಿ ಬಿಡುಗಡೆಯಾಗಿದೆ.

ಇಷ್ಟಕ್ಕೂ ಹ್ಯೂಮಾಗೆ ಯಾಕೆ ಈ ಕಾದಂಬರಿ ಬರೆಯಬೇಕೆನಿಸಿತು? ಈ ಪ್ರಶ್ನೆಯನ್ನು ಉತ್ಸವದಲ್ಲಿ ಅವರ ಮುಂದಿಟ್ಟಾಗ, 'ಇದನ್ನು ನಾನು 2019ರಲ್ಲಿ ಬರೆಯುವುದಕ್ಕೆ ಶುರು ಮಾಡಿದೆ. ಹತ್ತಿಪ್ಪತ್ತು ಪುಟಗಳನ್ನು ಬರೆದು, ಒಂದಿಷ್ಟು ಜನರಿಗೆ ತೋರಿಸಿದೆ. ಎಲ್ಲರೂ ಚೆನ್ನಾಗಿದೆ ಎಂದರು. ಆರಂಭದಲ್ಲಿ, ಈ ಕಥೆಯನ್ನು ಸಿನಿಮಾ ಅಥವಾ ಧಾರಾವಾಹಿ ಮಾಡಬೇಕು ಎಂಬ ಯೋಚನೆ ಇ...