Bengaluru, ಮಾರ್ಚ್ 3 -- Yuga Yugaadi Kaledaru Lyrics: ಯುಗಾದಿ ಹಬ್ಬವು ಚೈತ್ರ ಮಾಸದ ಮೊದಲ ದಿನ. ಇದು ಭಾರತೀಯರಿಗೆ ಹೊಸ ವರ್ಷವೂ ಹೌದು. ಯುಗಾದಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳಿವೆ. ಈ ಹಬ್ಬದ ಸಮಯದಲ್ಲಿ ಹಬ್ಬದ ಸಂಭ್ರಮ ಹೆಚ್ಚಿಸಲು ದ.ರಾ. ಬೇಂದ್ರೆಯವರ "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ" ಎಂಬ ಹಾಡು ಬೇಕೇಬೇಕು. ಬಹಳ ಅರ್ಥಪೂರ್ಣವಾದ ಈ ಹಾಡು ಯುಗಯುಗಗಳ ಕಾಲ ಶಾಶ್ವತವಾಗಿರುವಂತಹದ್ದು. ಭಾರತದಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಯುಗಾದಿ ಇದೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಯುಗಾದಿ ಎನ್ನುತ್ತಾರೆ. ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸ ವರ್ಷ ಎನ್ನುತ್ತಾರೆ. ಇದು ಸೌರಮಾನ ಯುಗಾದಿಯಾಗಿದೆ. ಈ ಬಾರಿಯ ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸಲು, ಈ ಸಮಯದಲ್ಲಿ ಗುಣುಗಲು, ಹಾಡಲು "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿ...