Bengaluru, ಏಪ್ರಿಲ್ 7 -- Yuddhakaanda Teaser: ಕೃಷ್ಣ ಅಜೇಯ್‌ ರಾವ್‌ ಇದೀಗ ಶತಾಯ ಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಲೇಟ್‌ ಆದರೂ ಲೇಟೆಸ್ಟ್‌ ಆಗಿ ಯುದ್ಧ ಸಾರಿದ್ದಾರೆ. ಅಂದರೆ, ʻಯುದ್ಧಕಾಂಡʼ ಸಿನಿಮಾ ಮೂಲಕ ಇನ್ನೇನು ಏಪ್ರಿಲ್‌ 18ರಂದು ತೆರೆ ಮೇಲೆ ಅಬ್ಬರಿಸಲಿದ್ದಾರೆ. ಕಂಟೆಂಟೇ ಕಿಂಗ್‌ ಎಂದು, ಗಟ್ಟಿ ಕಥೆಯೊಂದರಲ್ಲಿ ನಾಯಕನಾಗಿ ನಟಿಸುವುದಷ್ಟೇ ಅಲ್ಲ, ನಿರ್ಮಾಪಕರಾಗಿಯೂ ʻಯುದ್ಧಕಾಂಡʼ ಚಿತ್ರಕ್ಕೆ ಕೋಟಿ ಕೋಟಿ ಹಣ ಸುರಿದಿದ್ದಾರೆ ಅಜೇಯ್‌ ರಾವ್‌. ಈಗಾಗಲೇ ಯುದ್ಧಕಾಂಡದ ಸಣ್ಣ ಸಣ್ಣ ಝಲಕ್‌ ಕುತೂಹಲಕ್ಕೆ ಒಗ್ಗರಣೆ ಹಾಕಿವೆ. ಹೀಗಿರುವಾಗಲೇ ಭಾನುವಾರವಷ್ಟೇ ಬಿಡುಗಡೆ ಆದ ಟೀಸರ್‌ ನಿರೀಕ್ಷೆ ದುಪ್ಪಟ್ಟಾಗಿಸಿದೆ.

2022ರಲ್ಲಿ ಶೋಕಿವಾಲಾ ಸಿನಿಮಾ ಆದ ಬಳಿಕ, ಅಜೇಯ್‌ ರಾವ್‌ ಅವರ ಬೇರಾವ ಸಿನಿಮಾ ತೆರೆಗೆ ಬಂದಿಲ್ಲ. ತಡವಾದರೂ ಪರವಾಗಿಲ್ಲ, ಈ ಸಲ ಗೆಲ್ಲಲೇಬೇಕು ಎಂದು ಹಠತೊಟ್ಟು, ಕೋರ್ಟ್‌ ರೂಮ್‌ ಡ್ರಾಮಾದ ಜತೆಗೆ ಆಗಮಿಸಿದ್ದಾರೆ. ಶ್ರೀಕೃಷ್ಣ ಆರ್ಟ್ಸ್‌ ಮತ್ತು ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಯುದ್ಧಕಾಂ...