ಭಾರತ, ಏಪ್ರಿಲ್ 5 -- yuddhakaanda release date: ಸ್ಯಾಂಡಲ್‌ವುಡ್‌ ನಟ ಅಜೇಯ್‌ ರಾವ್‌ ಸುದೀರ್ಘ 3 ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಆಗಮಿಸಲು ಸಜ್ಜಾಗಿದ್ದಾರೆ. ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಅವರು, ಈ ಸಲ ತಮ್ಮ ಸಿನಿಮಾವನ್ನು ತಾವೇ ನಿರ್ಮಾಣ ಮಾಡಿದ್ದಾರೆ. 2022ರ ಏಪ್ರಿಲ್‌ 29ರಂದು ಅಜೇಯ್‌ ರಾವ್‌ ಅವರ ಶೋಕಿವಾಲಾ ಸಿನಿಮಾ ಬಿಡುಗಡೆ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಪೂರ್ಣಪ್ರಮಾಣದ ಅವರ ಸಿನಿಮಾ ರಿಲೀಸ್‌ ಆಗಿಲ್ಲ. ಇದೀಗ, ಯುದ್ಧಕಾಂಡ ಚಿತ್ರದ ಜತೆಗೆ ಗೆಲುವಿನ ಕನವರಿಕೆಯಲ್ಲಿದ್ದಾರೆ. ಶ್ರೀಕೃಷ್ಣ ಆರ್ಟ್ಸ್ ಮತ್ತು ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ ʻಯುದ್ಧಕಾಂಡʼ ಚಿತ್ರ ಏಪ್ರಿಲ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದ ಬಗ್ಗೆ ಮೊದಲು ಮಾತನಾಡಿದ ನಾಯಕ ಮತ್ತು ನಿರ್ಮಾಪಕ ಅಜೇಯ್‌ ರಾವ್‌, ʻಯುದ್ಧಕಾಂಡʼ ಪ್ರತಿಯೊಬ್ಬ ಮಹಿಳೆಯೂ ನೋಡಲೇಬೇಕಾದ ಚಿತ್ರ. ಮಹಿಳೆಯರ ಮೇಲೆ ಯಾವ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ ಎಂದು ತೋರಿಸುತ್ತಿರುವ ಚಿತ್...