ಭಾರತ, ಏಪ್ರಿಲ್ 13 -- Yuddhakaanda Trailer Lunch: ಎಕ್ಸ್‌ಕ್ಯೂಸ್‌ ಮೀ ಖ್ಯಾತಿಯ ನಟ ಅಜೇಯ್ ರಾವ್ ಕೃಷ್ಣನ್‌ ಲವ್‌ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ ಮುಂತಾದ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದಿದ್ದಾರೆ. ಇದೀಗ ನಟನೆಯ ಜೊತೆಗೆ ನಿರ್ಮಾಣದ ಹೊಣೆಯನ್ನು ಹೊತ್ತು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರ ನಟನೆ, ನಿರ್ಮಾಣದ ಬಹುನಿರೀಕ್ಷಿತ 'ಯುದ್ಧಕಾಂಡ ಚಾಪ್ಟರ್ 2' ಸಿನಿಮಾ ಏಪ್ರಿಲ್ 18ಕ್ಕೆ ಬಿಡುಗಡೆಯಾಗಲಿದೆ.

ಕಳೆದ ಕೆಲವು ದಿನಗಳಿಂದ ಚಂದನವನದಲ್ಲಿ ಅಜೇಯ್ ರಾವ್ ಹಾಗೂ ಯುದ್ಧಕಾಂಡ ಸಿನಿಮಾದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚಿಗೆ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕನ್ನಡ ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಟೀಸರ್‌ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಯುದ್ಧಕಾಂಡದ ಟ್ರೈಲರ್ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ ಅಜೇಯ್ ರಾವ್‌. ಯುದ್ಧಕಾಂಡ ಚಾಪ್ಟರ್ 2 ಟ್ರೈಲರ್ ಇಂದು (ಏಪ್ರಿಲ್ 13) ಬಿಡುಗಡೆಯಾಗುತ್ತಿದೆ.

ಅಪರಾಧ-ನ್ಯಾಯಾಲಯದ ಕಥಾಹಂದರವಿರುವ ಈ ಚಿತ್ರದಲ್ಲಿ ಅಜೇಯ್ ರಾವ್ ದೌರ್ಜನ್ಯಕ್ಕೊಳ...