ಭಾರತ, ಏಪ್ರಿಲ್ 14 -- Yuddhakaanada Movie: ಅಜೇಯ್‍ ರಾವ್‍ ಅಭಿನಯದ 'ಯುದ್ಧಕಾಂಡ' ಚಿತ್ರವು ಏಪ್ರಿಲ್‍ 18ರಂದು ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಅಜೇಯ್‍ ಹಲವು ಸಂದರ್ಶನಗಳಲ್ಲಿ ತಾವು ಸಾಲ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಚಿತ್ರಕ್ಕಿಂತ, ಚಿತ್ರದಲ್ಲಿನ ಕಳಕಳಿ ಮತ್ತು ಆಶಯಕ್ಕಿಂತ, ಅದೇ ಹೆಚ್ಚು ಸುದ್ದಿಯಾಗುತ್ತಿದೆ. ಪ್ರಚಾರಕ್ಕಾಗಿ ಅಜೇಯ್‍ ಸಾಲದ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಆದರೆ, ತನಗೆ ಭಯವಿಲ್ಲ, ಗಳಿಸುವ ತಾಕತ್ತಿದೆ ಎಂದು ಅಜೇಯ್‍ ಹೇಳಿಕೊಂಡಿದ್ದಾರೆ.

ಈ ಕುರಿತು 'ಯುದ್ಧಕಾಂಡ' ಪತ್ರಿಕಾಗೋಷ್ಠಿಯ ನಂತರ ಮಾತನಾಡಿರುವ ಅವರು, 'ನಾನಾಗಿಯೇ ಸಾಲದ ವಿಷಯದ ಬಗ್ಗೆ ಎಲ್ಲೂ ಮಾತನಾಡಿಲ್ಲ. ಸಂದರ್ಶನವೊಂದರಲ್ಲಿ ಸಾಲದ ವಿಚಾರ ಬಂತು. ಅದು ಹೆಚ್ಚು ಪ್ರಚಾರವಾಯಿತು. ಆ ನಂತರ ನನ್ನ ಕಾರ್ ಮಾರಾಟದ ವಿಷಯ ದೊಡ್ಡ ಸುದ್ದಿಯಾಯ್ತು. ಇದ್ಯಾವುದೂ ನಾನು ಮಾಡಿಲ್ಲ. ವೈಯಕ್ತಿವಾಗಿ ನನಗೆ ಇವೆಲ್ಲಾ ಇಷ್ಟವಿಲ್ಲ. ಪ್ರಶ್ನೆಗೆ ಉತ್ತರ ಕೊಟ್ಟೆ. ಈ ಮಟ್ಟಕ್ಕೆ ಹೋಗುತ್...