Bangalore, ಮಾರ್ಚ್ 8 -- Youtuber Sameer: ಹದಿಮೂರು ವರ್ಷದ ಹಿಂದೆ ಧರ್ಮಸ್ಥಳ ಸಮೀಪದಲ್ಲಿ ನಡೆದಿದ್ದ ಸೌಜನ್ಯಾ ಎಂಬ ವಿದ್ಯಾರ್ಥಿನಿ ಕೊಲೆ ಪ್ರಕರಣ ಈಗಲೂ ಸದ್ದು ಮಾಡುತ್ತಿದೆ. ಬಳ್ಳಾರಿ ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಯೂಟೂಬರ್‌ ಎಂಡಿ ಸಮೀರ್‌ ಎಂಬುವವರು ಧರ್ಮಸ್ಥಳ ಸುತ್ತಮುತ್‌ ನಡೆದಿರುವ ಸಂಶಯಾಸ್ಪದ ಸಾವಿನ ಹಳೆಯ ಪ್ರಕರಣಗಳನ್ನು ಪ್ರಸ್ತಾಪಿಸಿ ಮಾಡಿದ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ. ಸೌಜನ್ಯಾ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಹೆಸರು ಪ್ರಸ್ತಾಪಿಸಿರುವುದು ವಿವಾದದ ಮೂಲ. ಈ ಕಾರಣದಿಂದ ಸಮೀರ್‌ ವಿರುದ್ದ ಬಳ್ಳಾರಿ ಕೌಲ್‌ಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನನ್ನು ಬಂಧಿಸುವ ಮೊದಲೇ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದು, ವಿಡಿಯೋ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಧೂತ ಎನ್ನುವ ಹೆಸರಿನ ಯೂಟೂಬ್‌ ಚಾನಲ್‌ ಹೊಂದಿರುವ ಸಮೀರ್‌ ಯಾರು, ಸೌಜನ್ಯಾ ವಿಡಿಯೊ ಪ್ರಕರಣದ ಕುರಿತು ಇಲ್ಲಿದೆ ಮಾಹಿತಿ

Published by HT Digital Content Services with...