ಭಾರತ, ಏಪ್ರಿಲ್ 10 -- Arasu Kannada Full Movie: ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟಿಸಿದ ಸಿನಿಮಾಗಳನ್ನು ಒಟಿಟಿಗಳಲ್ಲಿ, ಯೂಟ್ಯೂಬ್‌ನಲ್ಲಿ ನೋಡಲು ಸಾಕಷ್ಟು ಜನರು ಬಯಸುತ್ತಾರೆ. ಅಪ್ಪು ನಟಿಸಿದ ಹಲವು ಸಿನಿಮಾಗಳಲ್ಲಿ ಅರಸು ಕೂಡ ಪ್ರಮುಖವಾದದ್ದು. ಈ ಸಿನಿಮಾದಲ್ಲಿ ದರ್ಶನ್‌ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿದ್ದಾರೆ. ಅರಸು ಮನೆತನದ ಶ್ರೀಮಂತ ಯುವಕನೊಬ್ಬನಿಗೆ ಕಷ್ಟ ಎಂದರೆ ಏನೆಂದು ತಿಳಿದಿರುವುದಿಲ್ಲ. ಆತ ಸ್ವಂತ ದುಡಿಮೆಗೆ ಮುಂದಾದಗ ಸ್ವಂತ ಪರಿಶ್ರಮದಿಂದ ನೂರು, ಐನೂರು, ಸಾವಿರ ರೂಪಾಯಿ ಗಳಿಸುವುದು ಎಷ್ಟು ಕಷ್ಟ ಎಂದು ತಿಳಿಯುತ್ತದೆ. ಈ ಸಮಯದಲ್ಲಿ ಈತನ ಜತೆ ಯುವತಿಯೊಬ್ಬಳು ಇರುತ್ತಾಳೆ. ಈತನನ್ನು ಗೊತ್ತಿಲ್ಲದೆ ಪ್ರೀತಿಸಿದ ಆ ಯುವತಿಯನ್ನು ಮದುವೆಯಾಗಬೇಕೆ? ನನ್ನನ್ನು ಮದುವೆಯಾಗಲು ಬಯಸಿದ ಯುವತಿಯನ್ನು ಮದುವೆಯಾಗಬೇಕೇ ಎಂಬ ಗೊಂದಲ ಈ ನಾಯಕನಿಗೆ ಕಾಡುತ್ತದೆ. ಕೊರಿಯನ್‌ ಡ್ರಾಮಾಗಳಲ್ಲಿರುವಂತೆ ಶ್ರೀಮಂತ ವ್ಯಕ್ತಿಯ ಕಥೆಯನ್ನು ಈ ಅರಸು ಸಿನಿಮಾ ಹೊಂದಿದೆ. ಒಂದಲ್ಲ, ಎರಡಲ್ಲ, ಹಲವು ಬಾರಿ ನೋಡಿದರೂ ಬೋರ್‌ ಹೊಡೆಸದ...