ಭಾರತ, ಮಾರ್ಚ್ 15 -- ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಇತ್ತೀಚಿನ ಜನರ ಮುಂದಿರುವ ಬಹುದೊಡ್ಡ ಸವಾಲು. ಬೇಡವೆಂದರೂ ದೇಹತೂಕ ಹೆಚ್ಚಿದಾಗ ಫಿಟ್ನೆಸ್‌ ಪಯಣವನ್ನು ಆರಂಭಿಸಲೇಬೇಕಾಗುತ್ತದೆ. ಫಿಟ್‌ನೆಸ್‌ ಜರ್ನಿಯ ಆರಂಭದಲ್ಲಿ ಯಾವ ರೀತಿಯ ವ್ಯಾಯಾಮಗಳನ್ನ ಆಯ್ಕೆ ಮಾಡಿಕೊಳ್ಳಬೇಕು, ಯೋಗ ಬೆಸ್ಟೋ, ವ್ಯಾಯಾಮ ಬೆಸ್ಟೋ, ಇಂತಹ ಗೊಂದಲಗಳು ಕಾಡುವುದು ಸಹಜ. ಫಿಟ್‌ನೆಸ್‌ ಕಾಯ್ದುಕೊಳ್ಳುವವರಿಗೆ ಹಲವು ಮಾರ್ಗಗಳಿದ್ದರೂ ಯೋಗ ಅದರಲ್ಲಿ ಅತ್ಯುತ್ತಮ ಎಂಬುದು ಸುಳ್ಳಲ್ಲ. ಇದರಿಂದ ದೇಹ ಹಾಗೂ ಮನಸ್ಸು ಎರಡೂ ಆರೋಗ್ಯದಿಂದಿರುತ್ತದೆ. ದೇಹ ಹಾಗೂ ಮನಸ್ಸಿನ ನಡುವೆ ಸಮತೋಲನ ಸಾಧಿಸಲು ಯೋಗ ಉತ್ತಮ. ಯೋಗದ ಆಸನಗಳು, ಪ್ರಾಣಾಯಾಮ, ಧಾನ್ಯ ಈ ಎಲ್ಲವೂ ನಮ್ಮ ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಾಯ ಮಾಡುವುದರಲ್ಲಿ ಅನುಮಾನವಿಲ್ಲ. ನೀವು ಮೊದಲ ಬಾರಿ ಯೋಗಾಭ್ಯಾಸ ಮಾಡುತ್ತಿದ್ದರೆ ಈ 8 ಭಂಗಿಗಳಿಂದ ಆರಂಭಿಸಿ.

ಇದನ್ನು ತಡಾಸನ ಎಂದೂ ಕರೆಯುತ್ತಾರೆ. ಇದು ಯೋಗ ಭಂಗಿಯ ಬಗ್ಗೆ ಅರಿವು ಮೂಡಿಸುತ್ತದೆ. ಭಂಗಿಯ ಸಮತೋಲನವನ್ನು ಕಾಪಾಡುತ್ತದೆ. ಇದು ತುದಿಗಾಲಿನಲ್ಲಿ ನ...