ಭಾರತ, ಫೆಬ್ರವರಿ 22 -- ಗಂಡಸರನ್ನು ಕಂಡರೇ ಆಗದ ಝಾನ್ಸಿ ಈಗ ಮದುವೆಯಾಗುತ್ತಾ ಇದ್ದಾಳೆ. ಮದುವೆಯ ಹಿಂದೆ ಸಾಕಷ್ಟು ಉಪಾಯ ಇದೆ.

ಅವಳ ತಾತ ಎಷ್ಟು ಸಾರಿ ಕೇಳಿದರೂ ನಾನು ಮದುವೆ ಆಗೋದೇ ಇಲ್ಲ ಎಂಬುದೇ ಝಾನ್ಸಿಯ ಉತ್ತರವಾಗಿತ್ತು.

ಆದರೆ ಅವಳು ರಾಘವೇಂದ್ರನ ಬಳಿ ಒಂದು ಒಪ್ಪಂದ ಮಾಡಿಕೊಂಡು ಮದುವೆಯಾಗುತ್ತಾ ಇದ್ದಾಳೆ.

ಆ ಒಪ್ಪಂದ ಏನು ಎನ್ನುವ ವಿಚಾರ ಮಾತ್ರ ಯಾರಿಗೂ ಗೊತ್ತಿಲ್ಲ. ಗೊತ್ತಾದರೆ ಪರಿಸ್ಥಿತಿ ಹೀಗೆ ಇರೋದಿಲ್ಲ.

ರಾಮಾಚಾರಿ ಈ ಮದುವೆ ಮಾಡಿಸಲು ಬಂದಿದ್ದಾನೆ. ರಾಮಾಚಾರಿ ಮದುವೆ ಮಾಡಿಸಿದರೆ, ಆ ಮದುವೆ ಎಂದಿಗೂ ಮುರಿಯುವುದಿಲ್ಲ ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ.

ಆದರೆ ಝಾನ್ಸಿ ತಾನು ಬೇರೆಯಾಗಬೇಕು ಎಂದೇ ಮದುವೆ ಆಗುತ್ತಿದ್ದಾಳೆ. ಒಂದು ತಿಂಗಳ ಒಪ್ಪಂದ ಪತ್ರ ಬರೆಸಿಕೊಂಡಿದ್ದಾಳೆ.

ಅದಾದ ನಂತರ ರಾಘವೇಂದ್ರನಿಂದ ತಾನು ದೂರ ಆಗುವ ಎಲ್ಲ ಉಪಾಯ ಮಾಡಿಟ್ಟುಕೊಂಡಿದ್ದಾಳೆ. ಅವಳ ತಾತ ಮಾತ್ರ ಮೊಮ್ಮಗಳು ಮದುವೆ ಆಗುತ್ತಿದ್ದಾಳೆ ಎಂದು ಖುಷಿಯಲ್ಲಿದ್ದಾರೆ.

ಝಾನ್ಸಿ ಮದುವೆ ಆದರೆ ಆಸ್ತಿಯೆಲ್ಲ ಅವಳ ಹೆಸರಿಗಾಗುತ್ತದೆ ...