ಭಾರತ, ಫೆಬ್ರವರಿ 24 -- ರಾಮಾಚಾರಿ ಝಾನ್ಸಿಯ ಮದುವೆ ಮಾಡಿಸಲು ಬಂದಿದ್ದಾನೆ. ರಾಘವೇಂದ್ರ ಝಾನ್ಸಿಯನ್ನು ಹಣಕ್ಕಾಗಿ ವರಿಸುತ್ತಿದ್ದಾನೆ.

ತಾಳಿ ಕಟ್ಟುವಾಗಲೂ ರಾಘವೇಂದ್ರನ ಮನಸಿನಲ್ಲಿ ಸಾಕಷ್ಟು ಗೊಂದಲ ಇದೆ. ಆದರೆ ಅವನು ಯಾರ ಬಳಿಯೂ ಹೇಳಿಕೊಂಡಿಲ್ಲ.

ತನ್ನ ಕಷ್ಟವನ್ನು ಯಾರ ಬಳಿಯೂ ಹೇಳಿಕೊಳ್ಳವ ಪರಿಸ್ಥಿತಿಯೂ ಅವನ ಎದುರಿಲ್ಲ. ಹಾಗಾಗಿ ಗತಿ ಇಲ್ಲದೇ ಝಾನ್ಸಿ ಕೊರಳಿಗೆ ತಾಳಿ ಕಟ್ಟಿದ್ದಾನೆ.

ತಾಳಿ ಕಟ್ಟಲು ಮುಂದಾದಾಗ ಅವನಿಗೆ ತನ್ನ ತಂಗಿಯ ಭವಿಷ್ಯವೊಂದೇ ಮುಖ್ಯ ಎನಿಸಿದೆ. ಆ ಕಾರಣಕ್ಕಾಗಿ ತಾಳಿ ಕಟ್ಟಿದ್ದಾನೆ.

ರಾಘವೇಂದ್ರನಿಗೆ ಆ ಸಂದರ್ಭದಲ್ಲಿ ತಾನು ಮದುವೆಯಾಗಬೇಕಿದ್ದ ಅನಿತಾ ಕೂಡ ನೆನಪಾಗಿದ್ದಾಳೆ. ಆದರೆ ಅವಳಿಗೆ ಅನ್ಯಾಯ ಆಗಿದೆ.

ಅನಿತಾ ಕೊರಳಿಗೆ ಕಟ್ಟಬೇಕಿದ್ದ ತಾಳಿಯನ್ನು ರಾಘು ತನ್ನ ಕೈಯ್ಯಾರೆ ಝಾನ್ಸಿಗೆ ಕಟ್ಟಿದ್ದಾನೆ.

ಮೊಮ್ಮಗಳು ಝಾನ್ಸಿಯ ಮದುವೆ ಕಂಡು ತಾತ ಭಾವುಕರಾಗಿದ್ದಾರೆ. ಮುಂದೇನಾಗಲಿದೆ ಎಂದು ಕಾದು ನೋಡಬೇಕಿದೆ.

Published by HT Digital Content Services with permission from HT Kann...