Bengaluru, ಮಾರ್ಚ್ 15 -- Xiaomi 15 Series Release: ಉತ್ತಮ ದರದಲ್ಲಿ ಅತ್ಯದ್ಭುತ ವೈಶಿಷ್ಟಗಳನ್ನು ಹೊಂದಿರುವ ಫೋನ್ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದೀರಾ, ಶಓಮಿ ನಿಮಗಾಗಿ ಹೊಸ ಫೋನ್ ಬಿಡುಗಡೆ ಮಾಡುತ್ತಿದೆ. ಶಓಮಿ 15 ಸೀರಿಸ್‌ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದ್ದು, ಮಾರ್ಚ್ 18 ರಿಂದ ಖರೀದಿಗೆ ಲಭ್ಯವಿದೆ.

ಶಓಮಿ ಇಂಡಿಯಾ 15 ಸೀರಿಸ್‌ ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯ ಹಾಗೂ ದರ ವಿವರಗಳ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹಿಂದಿನ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಈ ಸರಣಿಯ ಸ್ಮಾರ್ಟ್‌ಫೋನ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಲೀಕಾ ಸಮ್ಮಿಲಕ್ಸ್ ಆಪ್ಟಿಕಲ್ ಲೆನ್ಸ್‌ಗಳು ಮತ್ತು ಶಕ್ತಿಯುತ ಸ್ನಾಪ್ ಡ್ರ್ಯಾಗನ್ 8 ಎಲೈಟ್ ಮೊಬೈಲ್ ಪ್ಲಾಟ್ ಫಾರಂ ಶಓಮಿ ಹೈಪರ್ ಒಎಸ್ 2ನಿಂದ ಸನ್ನದ್ಧವಾಗಿದ್ದು, ಶಓಮಿ 15 ಸೀರೀಸ್ ಮುಂದಿನ ತಲೆಮಾರಿನ ಎಐ ಸಾಮರ್ಥ್ಯಗಳು, ಉನ್ನತೀಕರಿಸಿದ ಸಿಸ್ಟಂ ಆಪ್ಟಿಮೈಸೇಷನ್ ಮತ್ತು ಉನ್ನತ ಕನೆಕ್ಟಿವಿಟಿಗಳನ್ನು ನೀಡುತ್ತದೆ. ಶಓಮಿ 15 ಸರಣಿಯ ಸ...