ಭಾರತ, ಮಾರ್ಚ್ 14 -- ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಶನಿವಾರ (ಮಾರ್ಚ್ 15) ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ (WPL) 2025ರ ಫೈನಲ್‌ನಲ್ಲಿ ಮೆಗ್​ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲಿಗೆ ಸಜ್ಜಾಗಿದೆ. ಉದ್ಘಾಟನಾ ಆವೃತ್ತಿಯಲ್ಲೇ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ಮುಂಬೈ ಇದೀಗ 2ನೇ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಮತ್ತೊಂದೆಡೆ ಸತತ 3ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿರುವ ಡೆಲ್ಲಿ, ಮೊದಲ ಡಬ್ಲ್ಯುಪಿಎಲ್ ಕಿರೀಟದ ನಿರೀಕ್ಷೆಯಲ್ಲಿದೆ.

2023ರ ಫೈನಲ್​ನಲ್ಲೇ ಮುಖಾಮುಖಿಯಾಗಿದ್ದ ತಂಡಗಳೇ ಮತ್ತೆ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಕ್ಯಾಪಿಟಲ್ಸ್ ತಂಡವು ಮುಂಬೈಗಿಂತ ಉತ್ತಮ ರನ್​ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ಎಲಿಮಿನೇಟರ್​ನಲ್ಲಿ ಗುಜರಾತ್ ತಂಡವನ್ನು 47 ರನ್‌ಗಳಿಂದ ಸೋಲಿಸುವ ಮೂಲಕ ಹರ್ಮನ್​ ಪಡೆ, ಫೈನಲ್‌ಗೆ ಅರ್ಹತೆ ಪಡೆಯಿತು. ಇದರ...