ಭಾರತ, ಫೆಬ್ರವರಿ 22 -- ಡಬ್ಲ್ಯುಪಿಎಲ್‌ ಮೂರನೇ ಆವೃತ್ತಿಯ 8ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವನಿತೆಯರ ತಂಡದ ವಿರುದ್ಧ‌ ಯುಪಿ ವಾರಿಯರ್ಸ್‌ (Delhi Capitals Women vs UP Warriorz Women) ತಂಡವು 33 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಶಿನೆಲ್ ಹೆನ್ರಿ ಸ್ಫೋಟಕ ಅರ್ಧಶತಕ ಹಾಗೂ ಗ್ರೇಸ್‌ ಹ್ಯಾರಿಸ್‌ ಹ್ಯಾಟ್ರಿಕ್‌ ವಿಕೆಟ್‌ ಸಾಧನೆಯ ನೆರವಿಂದ ಪ್ರಸಕ್ತ ಆವೃತ್ತಿಯ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ದೀಪ್ತಿ ಶರ್ಮಾ ನೇತೃತ್ವದ ತಂಡ ಮೊದಲ ಜಯ ಸಾಧಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಜೀವಂತವಾಗಿ ಉಳಿದಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಯುಪಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 177 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಮೆಗ್‌ ಲ್ಯಾನಿಂಗ್‌ ಬಳಗವು, 19.3 ಓವರ್‌ಗಳಲ್ಲಿ 144 ರನ್‌ ಗಳಿಸಿ ಆಲೌಟ್‌ ಆಯ್ತು. ಈ ಗೆಲುವಿನಿಂದಾಗಿ ಯುಪಿ ವಾರಿಯರ್ಸ್ ತಂಡವು ಅಂಕಪಟ್ಟಿಯಲ್ಲಿ ಕೊನೆಗೂ ಖಾತೆ ತೆರೆದಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಕ್ಯಾಪಿಟಲ್ಸ್ ಮೊದಲು...