ಭಾರತ, ಮಾರ್ಚ್ 3 -- ಪರಿಸರ ನಾಶ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವನ್ಯಜೀವಿಗಳ ಬದುಕು ದುಸ್ತರವಾಗಿದೆ. ಕಾಡುಪ್ರಾಣಿಗಳ ಅವಾಸಸ್ಥಾನಕ್ಕೆ ಕುತ್ತು ಬಂದಿರುವ ಕಾರಣ ಅವು ಪಟ್ಟಣಗಳಲ್ಲೂ ಕಾಣಿಸಿಕೊಳ್ಳುವಂತಾಗಿದೆ. ಕಾಡುಗಳನ್ನೆಲ್ಲಾ ಕಡಿದು ಮನುಷ್ಯ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಕಾಡುಪ್ರಾಣಿಗಳಿಗೆ ವಾಸಿಸಲು ನೆಲೆ ಸಿಗುವುದು ಕಷ್ಟವಾಗಿದೆ. ಅಲ್ಲದೇ ಕಾಡುಪ್ರಾಣಿಗಳ ಅಕ್ರಮ ಸಾಗಾಟವೂ ಎಗ್ಗಿಲ್ಲದೇ ನಡೆಯುತ್ತಿದೆ. ಇದರೊಂದಿಗೆ ಹಲವಾರು ಸಸ್ಯ ಸಂಕುಲಗಳು ಅಳವಿನಂಚಿನಲ್ಲಿದೆ. ಇದು ಪರಿಸರ ವ್ಯವಸ್ಥೆಯ ವಿನಾಶವನ್ನು ಎತ್ತಿ ತೋರಿಸುವಂತಿದೆ. ಈ ಸಂದರ್ಭದಲ್ಲಿ ಕಾಡುಪ್ರಾಣಿಗಳ ಬಗ್ಗೆ ಹಾಗೂ ಸಸ್ಯ ಸಂಕುಲಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ 3 ರಂದು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತಿದೆ.‌

1973ರಲ್ಲಿ ಸಹಿ ಹಾಕಿದ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಪ್ರಭೇದ ಮತ್ತು ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶದ (CITES) ವಾರ್ಷಿಕೋತ್ಸವವನ್ನು ಗುರುತಿಸುವ ಉದ್ದೇ...