ಭಾರತ, ಮಾರ್ಚ್ 4 -- ಇಂದು (ಮಾರ್ಚ್ 4) ವಿಶ್ವ ಸ್ಥೂಲಕಾಯ ದಿನ ಅಥವಾ ವಿಶ್ವ ಬೊಜ್ಜು ದಿನ. ಸದ್ಯ ಪ್ರಪಂಚದಾದ್ಯಂತ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಬೊಜ್ಜು ಒಂದಾಗಿದೆ. ಸ್ಥೂಲಕಾಯದ ವಿಚಾರದಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ಅಮೆರಿಕಾ ಹಾಗೂ ಚೀನಾ ಕ್ರಮವಾಗಿ 1 ಹಾಗೂ 2ನೇ ಸ್ಥಾನದಲ್ಲಿದೆ.

ಭಾರತದಲ್ಲಿ ಬೊಜ್ಜಿನ ಸಮಸ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ವಯಸ್ಕರು ಹಾಗೂ ಮಕ್ಕಳು ಈ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಿದ್ದಾರೆ. 1990ರಲ್ಲಿ ಭಾರತದ ಮಹಿಳೆಯರಲ್ಲಿ ಬೊಜ್ಜಿನ ಪ್ರಮಾಣವು ಶೇ 1.2 ರಷ್ಟಿತ್ತು, ಪುರುಷರಲ್ಲಿ ಶೇ 0.5ರಷ್ಟಿತ್ತು. ಆದರೆ 2022ರಲ್ಲಿ ಇದು ಮಹಿಳೆಯರಲ್ಲಿ ಶೇ 9.8 ಹಾಗೂ ಪುರುಷರಲ್ಲಿ ಶೇ 5.4ಕ್ಕೆ ಏರಿಕೆಯಾಗಿದೆ.

ಲ್ಯಾನ್ಸೆಟ್ ಸಂಸ್ಥೆಯು ಇತ್ತೀಚೆಗೆ ನಡೆಸಿದ ಅಧ್ಯಯನವು ಆತಂಕಕಾರಿ ವಿಚಾರವೊಂದನ್ನು ಹೊರ ಹಾಕಿದೆ. ಆ ಅಧ್ಯಯನದ ಪ್ರಕಾರ ನಗರವಾಸಿಗಳಲ್ಲಿ ಶೇ 70 ರಷ್ಟು ಮಂದಿ ಅಧಿಕ ತೂಕ ಅಥವಾ ಸ್ಥೂಲಕಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲೇ ಹೇಳಿದಂತೆ ಬೊಜ್ಜಿನ ವಿಚಾರದಲ್ಲಿ ...