ಭಾರತ, ಮಾರ್ಚ್ 13 -- World Kidney Day: ಮನುಷ್ಯ ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಅಥವಾ ಮೂತ್ರಪಿಂಡ ಕೂಡ ಒಂದು. ಇದು ನಮ್ಮ ದೇಹದ ತ್ಯಾಜ್ಯ ಹಾಗೂ ವಿಷಾಂಶಗಳನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಸಮಸ್ಯೆ ಹೆಚ್ಚುತ್ತಿದೆ. ಮೂತ್ರಪಿಂಡವು ಸರಿಯಾಗಿ ಕೆಲಸ ಮಾಡಿಲ್ಲ ಎಂದರೆ ದೇಹದಿಂದ ತ್ಯಾಜ್ಯಗಳು ಹೊರ ಹೋಗುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ.

ಕಿಡ್ನಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ ತಿಂಗಳ 2ನೇ ಗುರುವಾರವನ್ನು ವಿಶ್ವ ಮೂತ್ರಪಿಂಡ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 13 ಅಂದರೆ ಇಂದು ಕಿಡ್ನಿ ಡೇ ಇದೆ. ಈ ದಿನ ಮೂತ್ರಪಿಂಡ ಸಂಬಂಧಿತ ರೋಗಗಳು ಮತ್ತು ಸೋಂಕುಗಳು ಮತ್ತು ಅವುಗಳನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ.

ಮುಂಬೈ ಸೆಂಟ್ರಲ್‌ನ ವೋಕ್‌ಹಾರ್ಡ್ ಆಸ್ಪತ್ರೆಗಳ ಸಲಹೆಗಾರ ನೆಫ್ರಾಲಜಿಸ್ಟ್ ಮತ್ತು ಮೂತ್ರಪಿಂಡ ಕಸಿ ವೈದ್ಯ ಡಾ. ನಿಖಿಲ್ ಭಾಸಿನ್ ದೀರ್ಘಕಾಲದ ಮೂತ್ರಪಿಂಡ...