ಭಾರತ, ಫೆಬ್ರವರಿ 3 -- ಕ್ಯಾನ್ಸರ್ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಮಾರಕ ರೋಗ, ಗೊತ್ತೇ ಆಗದಂತೆ ದೇಹದಲ್ಲಿ ಬೆಳೆದು ನಂತರ ಮಾರಣಾಂತಿಕವಾಗುತ್ತದೆ. ಯಾವುದೇ ಕ್ಯಾನ್ಸರ್ ಆದರೂ ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದರಿಂದ ಪ್ರಾಣಾಪಾಯದ ಸಂಭವ ಕಡಿಮೆ. ಆದರೆ ಕೆಲವು ಕ್ಯಾನ್ಸರ್‌ಗಳನ್ನು ಕೊನೆ ಹಂತಕ್ಕೆ ತಲುಪುವವರೆಗೂ ಗುರುತಿಸಲು ಸಾಧ್ಯವಾಗುವುದೇ ಇಲ್ಲ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ, ಜನರಲ್ಲಿ ತಿಳುವಳಿಕೆ ಬರುವಂತೆ ಮಾಡಲು ಹಾಗೂ ಕ್ಯಾನ್ಸರ್ ರೋಗಿಯ ಕಾಳಜಿ ಬಗ್ಗೆ ಮನೆಯವರು ಹಾಗೂ ಆಪ್ತರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ.

ಹಾಗಾದರೆ ವಿಶ್ವ ಕ್ಯಾನ್ಸರ್ ದಿನ ಯಾವಾಗ, ಈ ದಿನವನ್ನು ಆಚರಿಸುವ ಉದ್ದೇಶವೇನು, ಈ ದಿನಾಚರಣೆಯ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರತಿ ವರ್ಷ ಫೆಬ್ರುವರಿ 4ಕ್ಕೆ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಮಂಗಳವಾರ ವಿಶ್ವ ಕ್ಯಾನ್ಸರ್ ದಿನಾಚರಣೆ ಇದೆ. ಇದು ಜಾಗತಿಕ ಮಟ್ಟದಲ್ಲಿ ಹಲವ...