ಭಾರತ, ಮಾರ್ಚ್ 30 -- World Autism Day 2025: ಪ್ರತಿ ವರ್ಷ ಏಪ್ರಿಲ್ 2 ಅನ್ನು ವಿಶ್ವ ಆಟಿಸಂ ದಿನ ಎಂದು ಆಚರಿಸಲಾಗುತ್ತದೆ. ಆಟಿಸಂ ಎಂಬುದು ಮೆದುಳು ಹಾಗೂ ನರ ಸಂಬಂಧಿ ಸಮಸ್ಯೆ. ಈ ದಿನವನ್ನು ಜನಸಾಮಾನ್ಯರಲ್ಲಿ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮೀಸಲಿಡಲಾಗಿದೆ.

ಇಂದು ಜನಿಸುತ್ತಿರುವ ಪ್ರತಿ 60 ಮಕ್ಕಳಲ್ಲಿ ಒಂದು ಮಗು ಆಟಿಸಂ ಲಕ್ಷಣಗಳನ್ನು ತೋರಿಸುತ್ತಿದೆ ಎಂಬುದು ಆತಂಕಕಾರಿ ವಿಚಾರ. ಸಾರ್ವಜನಿಕರು ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದು ಅವಶ್ಯಕ. ಆದರೆ ಹೆಚ್ಚಾಗಿ ಇದು ತಮಗೆ ಸಂಬಂಧವಿಲ್ಲದ ವಿಷಯ ಎಂದೇ ಸುಮ್ಮನಾಗುತ್ತಾರೆ. ಆದರೆ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD) ಸಾಮಾಜಿಕ ಸಂವಹನದ ಮೇಲೆ ಪರಿಣಾಮ ಬೀರುವ ಬೆಳವಣಿಗೆಯ ಸ್ಥಿತಿ

ಆಟಿಸಂ ಕುರಿತು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಮಾತು ಬರುತ್ತಿದ್ದರೂ ಸಮರ್ಪಕವಾಗಿ ಸಂವಹನ ಮಾಡಲಾಗದ , ಕೇಳುತ್ತಿದ್ದರೂ ಕೇಳಿಸಿಕೊಳ್ಳಲಾರದ, ಇತರರೊಂದಿಗೆ ಬೆರೆಯಲಾಗದ ರಚನಾತ್ಮಕವಾದ ಹಾಗೂ ವೈವಿಧ್ಯಮಯವಾದ ಕಲ್ಪನೆ ಅಥವಾ ...