Bengaluru, ಮಾರ್ಚ್ 18 -- ಹೆಣ್ಣುಮಕ್ಕಳು ಕೆಲಸಕ್ಕೆಂದು ಹೊರಗೆ ಹೋಗುತ್ತಾರೆ ಎಂದರೆ ಅವರ ಬಗ್ಗೆ ಸಮಾಜದ ಕೆಲವರಲ್ಲಿ ಇಂದಿಗೂ ಒಂದು ರೀತಿಯ ಭಾವನೆಯಿರುತ್ತದೆ. ಹೆಣ್ಣುಮಕ್ಕಳು ಮನೆಯಲ್ಲೇ ಇರಬೇಕು ಅಥವಾ ಮನೆಗೆಲಸವನ್ನಷ್ಟೇ ಮಾಡಬೇಕು ಎಂದುಕೊಂಡಿರುತ್ತಾರೆ. ಅಲ್ಲದೇ, ಸಾಮಾಜಿಕ ಕಟ್ಟುಪಾಡುಗಳು ಒಂದೆಡೆಯಾದರೆ, ಮತ್ತೊಂದೆಡೆ ಗಂಡನ ಮನೆ ಮತ್ತು ಗಂಡನ ಕಿರುಕುಳ, ಕಿರಿಕಿರಿಯೂ ಸಾಕಷ್ಟು ಇರುತ್ತದೆ. ಹೀಗಾಗಿ ಅವರು ಎಲ್ಲವನ್ನೂ ಸಹಿಸಿಕೊಂಡು, ಎದುರಿಸಿಕೊಂಡು ಬದುಕುವ ದಿನಗಳೂ ಇರುತ್ತವೆ. ಅಂಥವರ ಬಗ್ಗೆ ಕಾಳಜಿ ವಹಿಸುವವರೂ ಕಡಿಮೆ. ಅವರ ಕಷ್ಟ ಕೇಳುವವರೂ ಅಷ್ಟಕಷ್ಟೇ.

ಹೆಣ್ಣುಮಗಳೊಬ್ಬಳು ಹೆರಿಗೆಯಾಗಿ ಪುಟ್ಟ ಮಗು ಇದ್ದರೂ, ವಿಶ್ರಾಂತಿ ಪಡೆಯದೇ, ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯಿರುತ್ತದೆ. ಅದರಿಂದಾಗಿ ಅವಳು ಮನೆಗೆಲಸಕ್ಕೆ ಹೋಗುವಾಗ, ಅಲ್ಲಿ ಮಗುವನ್ನು ಕೂಡ ಕರೆದುಕೊಂಡು ಹೋಗುತ್ತಾಳೆ. ಮಗುವನ್ನು ಅಲ್ಲಿಯೇ ಮಲಗಿಸಿಕೊಂಡು ಮನೆಗೆಲಸ ಮುಂದುವರಿಸುತ್ತಾಳೆ. ಇಂತಹ ಬಹಳಷ್ಟು ಹೆಣ್ಣುಮಕ್ಕಳ ಬವಣೆಗಳು ಬೆಂಗಳೂರಿನಂತಹ ಮಹಾನಗರಗಳಲ್ಲ...