Bangalore, ಮಾರ್ಚ್ 2 -- 22 ವಯಸ್ಸಿಗೆ ಐಎಎಸ್‌ ಅಧಿಕಾರಿಯಾಗಿ ಕರ್ನಾಟಕ ಸೇವೆಗೆ ಬಂದು ಈಗಾಗಲೇ 36 ವರ್ಷಗಳ ಸೇವೆ ಮುಗಿಸಿ ಕಳೆದ ವರ್ಷ ಮುಖ್ಯಕಾರ್ಯದರ್ಶಿ ಹುದ್ದೆಗೆ ಬಂದ ಡಾ.ಶಾಲಿನಿ ರಜನೀಶ್‌ ಇನ್ನು ಎರಡು ವರ್ಷ ಮುಖ್ಯಕಾರ್ಯದರ್ಶಿಯಾಗಿದ್ದಾರೆ. ಕರ್ನಾಟಕದಲ್ಲಿ ಡಿಸಿ, ಪ್ರಾದೇಶಿಕ ಇಲಾಖೆ ಆಯುಕ್ತರಾಗಿ, ಹಲವು ಇಲಾಖೆ ಕಾರ್ಯದರ್ಶಿಯಾಗಿ ಈಗ ಉನ್ನತ ಹುದ್ದೆಗೆ ಏರಿದ್ದಾರೆ.

ಮೂಲತಃ ಉತ್ತರಾಖಂಡದವರಾದರೂ 23 ವಯಸ್ಸಿನಲ್ಲೇ ಐಎಫ್‌ಎಸ್‌ ಅಧಿಕಾರಿಯಾಗಿ ಕರ್ನಾಟಕ ಸೇವೆಗೆ ಬಂದವರು ಮೀನಾಕ್ಷಿ ನೇಗಿ. ಇವರೂ ಕೂಡ ವಿವಿಧ ಹುದ್ದೆ ಅಲಂಕರಿಸಿ ಈಗ ಕರ್ನಾಟಕದ ಅರಣ್ಯ ಪಡೆಗಳ ಮುಖ್ಯಸ್ಥರು. ಈ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ.

ಉಮಾಮಹಾದೇವನ್‌ ಅವರು ಕರ್ನಾಟಕ ಕೇಡರ್‌ನ ಹಿರಿಯ ಐಎಎಸ್‌ ಅಧಿಕಾರಿ. ಕರ್ನಾಟಕದಲ್ಲಿ ಗ್ರಂಥಾಲಯಗಳಿಗೆ ಕಾಯಕಲ್ಪ ನೀಡಿದವರು. ಪಂಚಾಯಿತಿ ಆಡಳಿತದಲ್ಲಿ ಹೊಸತನ ತಂದವರು. ಈಗ ಕರ್ನಾಟಕ ಅಭಿವೃದ್ದಿ ಆಯುಕ್ತೆಯಾಗಿದ್ದಾರೆ.

ಸೀಮಾ ಗರ್ಗ್‌ ಅವರು ಕರ್ನಾಟಕ ಕೇಡರ್‌ನ ಐಎಫ್‌ಎಸ್‌ ಅಧಿಕಾರಿ. ಬೆಂಗಳೂರು, ಧಾರವಾಡ ಸ...