ಭಾರತ, ಮಾರ್ಚ್ 5 -- ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನ. ಈ ದಿನ ಲಿಂಗ ಸಮಾನತೆಯನ್ನು ಎತ್ತಿ ಹಿಡಿದು ಮಹಿಳೆಯರನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ಮಾಡಲಾಗುತ್ತದೆ. ಹೆಣ್ಣುಮಕ್ಕಳು ಇಂದು ಕಾಲಿಡದ ಕ್ಷೇತ್ರವಿಲ್ಲ. ಭೂಮಿ ಮೇಲೆ ಮಾತ್ರವಲ್ಲ ಬಾಹ್ಯಾಕಾಶ ಕ್ಷೇತ್ರಕ್ಕೂ ಕಾಲಿರಿಸುವ ಮೂಲಕ ಸಾಧನೆ ಮಾಡುತ್ತಿದ್ದಾರೆ. ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲಿ ಹೆಣ್ಣುಮಕ್ಕಳಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ತೋರುವ ಮೂಲಕ ಗಂಡು-ಹೆಣ್ಣು ಸಮಾನರು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಪ್ರಪಂಚದಾದ್ಯಂತ ಉದ್ಯಮ, ಬಾಹ್ಯಾಕಾಶ, ಮಿಲಿಟರಿ, ವೈದ್ಯಕೀಯ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಮಹತ್ವದ ಸ್ಥಾನದಲ್ಲಿದ್ದಾರೆ. ಆದರೆ ಇಂದಿನ ಹೆಣ್ಣುಮಕ್ಕಳಿಗೆ ಅಂದು ಆಯಾ ಆಯಾ ಕ್ಷೇತ್ರಕ್ಕೆ ಮೊದಲು ಕಾಲಿರಿಸುವ ಮೂಲಕ ಸ್ಫೂರ್ತಿಯಾದವರು ಹಲವರು. ರಾಜಕೀಯದಿಂದ ಬಾಹ್ಯಾಕಾಶದವರೆಗೆ ಅಂದು ವಿವಿಧ ಕ್ಷೇತ್ರಗಳಲ್ಲಿ ಪ್ರಥಮವಾಗಿ ಕಾಲಿಡುವ ಮೂಲಕ ಸಾಧನೆ ಮಾಡಿ, ಬೇರೆ ಮಹಿಳೆಯರು ತಮ್ಮನ್...