ಭಾರತ, ಮಾರ್ಚ್ 8 -- ಇಂದು (ಮಾರ್ಚ್ 8) ಅಂತರರಾಷ್ಟ್ರೀಯ ಮಹಿಳಾ ದಿನ, ಹೆಣ್ಣುಮಕ್ಕಳ ಅಸ್ತಿತ್ವವನ್ನು ಗುರುತಿಸಿ, ಗೌರವಿಸುವ ದಿನ. ಹೆಣ್ಣು ಎಂದರೆ ದೇವತೆ ಎಂದು ಪೂಜಿಸುವ ಈ ಜಗತ್ತಿನಲ್ಲಿ ಹೆಣ್ಣಿನ ಪರಿಕಲ್ಪನೆಯೇ ಬದಲಾಗಿದೆ. ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ ಎಂಬ ಆತಂಕ ಒಂದೆಡೆಯಾದರೆ ಹೆಣ್ಣುಮಕ್ಕಳನ್ನು ಮಾತನಾಡಿಸಿದರೂ ಶಿಕ್ಷೆಯಾಗಬಹುದು ಎಂಬ ಆತಂಕ ಇನ್ನೊಂಡೆದೆ. ಇದಕ್ಕೆಲ್ಲಾ ಕಾರಣ ಬದಲಾಗುತ್ತಿರುವ ಸಮಾಜ.

ಇತ್ತೀಚಿನ ದಿನಗಳಲ್ಲಿ ಕೆಲವರು ಹೆಣ್ಣುಮಕ್ಕಳ ವಿಚಾರಕ್ಕೆ ತಲೆ ಹಾಕಲು ಹಿಂಜರಿಯುತ್ತಿದ್ದಾರೆ. ಹೆಣ್ಣುಮಕ್ಕಳ ಸುರಕ್ಷತೆ ಸವಾಲಾಗಿರುವ ಈ ದಿನಗಳಲ್ಲಿ ಪರಿಸ್ಥಿತಿ ಹೇಗಾಗಿದೆ ಎಂದರೆ ಎಲ್ಲಾದರೂ ರಸ್ತೆಯಲ್ಲಿ ಹುಡುಗಿಯೊಬ್ಬಳು ಬಿದ್ದರೂ ಕೈ ಹಿಡಿದು ಎತ್ತಲು ಜನ ಹಿಂಜರಿಯುತ್ತಾರೆ, ಎಲ್ಲಿ ತಾನು ಕೆಟ್ಟ ಅರ್ಥದಲ್ಲಿ ಕೈ ಹಿಡಿದೆ ಎಂದು ಜನ ಹಾಗೂ ಬಿದ್ದಿರುವ ಹುಡುಗಿ ತನ್ನ ವಿರುದ್ಧವೇ ಹೋಗುತ್ತಾರೆ ಎನ್ನುವ ಭಯ. ಎಲ್ಲೋ ಸಂಜೆ ಹೊತ್ತಿಗೆ ಬಸ್‌ಸ್ಟ್ಯಾಂಡ್‌ನಲ್ಲಿ ಒಬ್ಬಳೇ ನಿಂತಿರುವ ಹುಡುಗಿಯನ್ನು ಮಾತನಾಡಿಸಲು ಅಲ್...